ಹುಬ್ಬಳ್ಳಿ: ದೇಶ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಕಾರ್ಮಿಕರ ಪಾತ್ರವೂ ಮುಖ್ಯವಾಗಿದೆ. ಸರಕಾರ ಹಾಗೂ ಸಮಾಜದಿಂದ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸ್ಫೂರ್ತಿ ಸಿಗಬೇಕೆಂದು ಸಹಕಾರ ಇಲಾಖೆಯ ಅಧಿಕಾರಿ ವಿಶ್ವನಾಥ ಹಳ್ಳಿಕೇರಿ ಅಭಿಪ್ರಾಯಪಟ್ಟರು.
ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಇಲ್ಲಿನ ನವನಗರ ಅಧ್ಯಾಪಕ ನಗರದ ಭಾರತಾಂಬೆ ಮಹಿಳಾ ಮಂಡಳ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಕಾರ್ಮಿಕ ಶಕ್ತಿ ಇನ್ನೂ ಜಾಗೃತಗೊಳ್ಳಬೇಕು ಎಂದರು.
ಪಾಲಿಕೆಯ ಸ್ವತ್ಛತಾ ಕಾರ್ಯ ಸಂಯೋಜಕ ಕೃಷ್ಣಾ ಎನ್. ಸಡಲ್ ಸೇರಿದಂತೆ ಹತ್ತು ಮಹಿಳಾ ಪೌರ ಕಾರ್ಮಿಕರು ಮತ್ತು ಇತರೆ ಸ್ವತ್ಛತಾ ಸಿಬ್ಬಂದಿಯನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೆ.ಟಿ.ಪಾಟೀಲ, ರಾಜಶೇಖರ ಹಿರೇಮಠ, ಈರಣ್ಣ ಗಾಣಿಗೇರ, ಸವಿತಾ ಎಸ್.ಎಚ್. ಮಾತನಾಡಿ, ಪ್ರಧಾನಿಯವರ ಸ್ವತ್ಛ ಭಾರತ ಅಭಿಯಾನ ಯಶಸ್ವಿಯಾಗುವುದು ಕಾರ್ಮಿಕರ ಮೇಲೆಯೇ ಅವಲಂಬಿತವಾಗಿದೆ.
ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಹೊಣೆಗಾರಿಕೆ, ಪಾತ್ರ ಮಹತ್ವದಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಂಡಳದ ಅಧ್ಯಕ್ಷೆ ಚಂದ್ರಕಲಾ ಚಿನ್ನಪ್ಪಗೌಡರ ಮಾತನಾಡಿ, ಬಡಾವಣೆಯ ಸ್ವತ್ಛತೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ನಿವಾಸಿಗಳಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸುನೀಲ ಪಾಟೀಲ, ಯಲ್ಲಪ್ಪ ಮುಂಡರಗಿ, ಕಸ್ತೂರಿ ಪರಸಿ, ಯೋಗಶಿಕ್ಷಕಿ ವಿನೋದಾ ಛಪ್ರಹಳ್ಳಿಮಠ, ರೇಣುಕಾ ಹಳ್ಳಿಕೇರಿ, ನೀಲಾ ಕೆ. ಪಾಟೀಲ, ಸುಲೋಚನಾ ಹಿರೇಮಠ, ಗೀತಾ ಎ.ಎಸ್., ಶಂಕ್ರಮ್ಮ ಜನಗೌಡರ, ಸೋನಕ್ಕ ದಳವಾಯಿ, ಮಾಲಾ ಗಡಾದ, ಮಹಿಳಾ ಮಂಡಳದ ಪದಾಧಿಕಾರಿಗಳು, ಸದಸ್ಯೆಯರು ಪಾಲ್ಗೊಂಡಿದ್ದರು. ಕಾರ್ಯದರ್ಶಿ ನಂದಿನಿ ಕೋಳಿವಾಡ ನಿರೂಪಿಸಿದರು. ನಾಗರತ್ನಾ ಮುಂಡರಗಿ ವಂದಿಸಿದರು.