Advertisement

ಬೆಂಕಿ ಹಚ್ಚಿ ಕಾರ್ಮಿಕನ ಕೊಲೆ: ಉಪ್ಪಿನಂಗಡಿಯಲ್ಲಿದ್ದ ಕಾರ್ಮಿಕ ಜಗನ್‌

12:15 AM Jul 12, 2023 | Team Udayavani |

ಉಪ್ಪಿನಂಗಡಿ: ಮಂಗಳೂರಿನ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮುಳಿಹಿತ್ಲು ಎಂಬಲ್ಲಿ ತೌಷಿಫ್ ಹುಸೇನ್‌ ಎಂಬಾತನಿಂದ ಬೆಂಕಿ ಹಚ್ಚಲ್ಪಟ್ಟು ಕೊಲೆಗೀಡಾದ ಜಗ್ಗು ಆಲಿಯಾಸ್‌ ಜಗನ್‌ 2020ನೇ ಇಸವಿಯ ಲಾಕ್‌ಡೌನ್‌ ಸಮಯದಲ್ಲಿ ಉಪ್ಪಿನಂಗಡಿಯಲ್ಲಿದ್ದು, ಎಲ್ಲರ ಪ್ರೀತಿಪಾತ್ರನಾಗಿದ್ದ.

Advertisement

ಲಾಕ್‌ ಡೌನ್‌ ಘೋಷಣೆಯಾಗದ ಸಮಯ ಅದೊಂದು ದಿನ ಉಪ್ಪಿನಂಗಡಿ ಸನಿಹದ 34 ನೇ ನೆಕ್ಕಿಲಾಡಿಯಲ್ಲಿ ವಾರದ ಸಂತೆ ನಡೆಯುತ್ತಿದ್ದ ಸ್ಥಳದಲ್ಲಿ ಹಸಿವಿನಿಂದ ಆಹಾರವನ್ನು ಯಾಚಿಸುತ್ತಿದ್ದ ಈ ಯುವಕನ ಬಗ್ಗೆ ಕರುಣೆ ತೋರಿ ಸಂತೆಗೆ ಹೋಗಿದ್ದ ಉಪ್ಪಿನಂಗಡಿಯ ತರಕಾರಿ ವ್ಯಾಪಾರಿ ಬಶೀರ್‌ ಅವರು ಆಹಾರ ನೀಡಿ, ತರಕಾರಿ ಲೋಡ್‌ ಮಾಡಲು ತಿಳಿಸಿದ್ದರು.

ಉತ್ತಮವಾಗಿ ಕೆಲಸ ಮಾಡಿದ ಈತನನ್ನು ಬಳಿಕ ತನ್ನ ತರಕಾರಿ ಅಂಗಡಿಗೆ ಕರೆ ತಂದಿದ್ದರು. ಬಳಿಕ ಲಾಕ್‌ ಡೌನ್‌ ಘೋಷಣೆಯಾಗಿ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದರೂ, ಅಂಗಡಿಗಳು ತೆರೆಯಲ್ಪಟ್ಟ ಸಮಯದಲ್ಲಿ ಕೆಲಸ ಮಾಡುತ್ತಾ, ಯಾರದರೂ ತಿಂಡಿ ಕೊಟ್ಟರೆ ತಿನ್ನುತ್ತಿದ್ದ ಈತ ಹಣಕ್ಕಾಗಿ ಏನನ್ನೂ ಮಾಡುತ್ತಿರಲಿಲ್ಲ. ಮೇಲ್ನೋಟಕ್ಕೆ ಆದಿವಾಸಿ ಜನಾಂಗದವರಂತೆ ಕಾಣುತ್ತಿದ್ದ ಆತನಿಗೆ ಹಣದ ಬಗ್ಗೆ ಅರಿವೂ ಇರಲಿಲ್ಲ. ಹೊಟ್ಟೆ ತುಂಬಾ ಊಟ, ಧರಿಸಲು ಚೆಂದದ ಡ್ರೆಸ್‌ ಬಯಸುತ್ತಿದ್ದ. ಮಾತು ತೀರಾ ಕಡಿಮೆ. ತನ್ನ ಹೆಸರನ್ನು ಜಗನ್‌ ಎಂದು ತಿಳಿಸಿ, ವಿಳಾಸವನ್ನು ಅಸ್ಸಾಂ ರಾಜ್ಯದ ಸುಂದರ್‌ಗಢ್‌ ಎಂದು ಅರೆ ಬರೆಯಾಗಿ ತಿಳಿಸುತ್ತಿದ್ದ. ಆತ ನೀಡುತ್ತಿದ್ದ ಮಾಹಿತಿಯನ್ನು ಶೋಧಿಸಿದಾಗ ಸುಂದರ್‌ಗಢ್‌ ಎಂಬುವುದು ಒಡಿಶಾದಲ್ಲಿ ಇದ್ದಂತಿತ್ತು.

ಅದೊಂದು ದಿನ ತರಕಾರಿ ವ್ಯಾಪಾರಿ ಬಶೀರ್‌ ಜತೆಗೂಡಿ ಮಂಗಳೂರಿಗೆ ಹೋದಾತ ವಾಹನಕ್ಕೆ ತರಕಾರಿ ಲೋಡ್‌ ಮಾಡಿ ಊರಿಗೆ ಹೊರಡಲು ಅನುವಾದಾಗ ನಾಪತ್ತೆಯಾಗಿದ್ದ. ಬಳಿಕ ಆತ ಹುಸೇನ್‌ ಅಂಗಡಿಯಲ್ಲಿ ಸೇರಿರಬೇಕೆಂದು ಭಾವಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next