Advertisement

ದುಡಿಮೆಗಿದೆ ಸಂಪತ್ತನ್ನು ಸೃಷ್ಟಿಸುವ ಶಕ್ತಿ: ಕಾಗೋಡು

06:19 PM Nov 21, 2017 | |

ಸಾಗರ: ರೈತರು ಉಪಕಸುಬುಗಳನ್ನು ಕೈಗೊಂಡರೆ ಆರ್ಥಿಕ ಸುಧಾರಣೆ ಆಗುತ್ತದೆ. ಶ್ರಮದ ಬಗ್ಗೆ ನಂಬಿಕೆ ಇದ್ದರೆ ಭೂಮಿಯನ್ನು ಬಂಗಾರವನ್ನಾಗಿ ಮಾಡಬಹುದು. ದುಡಿಮೆಗೆ ಸಂಪತ್ತನ್ನು ಸೃಷ್ಟಿ ಮಾಡುವ ಶಕ್ತಿ ಇದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

Advertisement

ತಾಲೂಕಿನ ತ್ಯಾಗರ್ತಿ ಸಮೀಪದ ಅಬಸೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆ ಹಸ್ತಾಂತರ ಮತ್ತು ತ್ಯಾಗರ್ತಿ ರಸ್ತೆಯಿಂದ ಅಬಸೆ ಬಿಳಿಸಿರಿ ರಸ್ತೆ 1.32 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಜನಸಂಖ್ಯೆ ಹೆಚ್ಚಾದಂತೆ ಜಮೀನು ಕಡಿಮೆ ಆಗುತ್ತಿದ್ದು, ಉತ್ಪಾದನೆ ಜಾಸ್ತಿ ಆಗಬೇಕು ಎಂದರು. ರಾಜಕೀಯ ಎಂದರೆ ಚುನಾವಣೆಗೆ ಮಾತ್ರವಲ್ಲ. ಇದೊಂದು ಸಾಮಾಜಿಕ ಸೇವಾ ಕ್ಷೇತ್ರವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ 50 ಸಾವಿರ ಕೋಟಿ ಬರಬೇಕಾಗಿದ್ದು, ಕೇವಲ 3 ಸಾವಿರ ಕೋಟಿ ಮಾತ್ರ ಬಂದಿದೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಯೋಜನೆಯ ಬಗ್ಗೆ ಸಂಪುಟದ ಮಂತ್ರಿಗಳಲ್ಲೇ ಅಪಸ್ವರ ಇದೆ. ಜಗತ್ತಿನಲ್ಲಿ ಎಲ್ಲೂ ಇಲ್ಲದ ಯೋಜನೆ ಇದಾಗಿದ್ದು, 100 ದಿನ ದುಡಿಯುವ ಹಕ್ಕನ್ನು ನೀಡಲಾಗಿದೆ. ಇದರ ಅನುಷ್ಠಾನ ಸರಿಯಾಗಿ ಮಾಡಿದರೆ ಗ್ರಾಮದ ಅಭಿವೃದ್ಧಿ ಹಾಗೂ ದುಡಿಯುವ ರೈತರ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ನಂದಿನಿಶೇಟ್‌ ಮಾತನಾಡಿ, ಶ್ರೀಕ್ಷೇತ್ರದ ವತಿಯಿಂದ ರಾಜ್ಯದ 130 ಕೆರೆಗಳ ಪುನಶ್ಚೇತನ ನಡೆಯುತ್ತಿದ್ದು, ಪ್ರತಿ ವರ್ಷ ಪ್ರತೀ ತಾಲೂಕಿನ ಒಂದು ಕೆರೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದರಲ್ಲಿ ಗ್ರಾಮದ ಕೆರೆ ಅಭಿವೃದ್ಧಿ ಸಮಿತಿಯವರು ಶ್ರಮದಾನದ ಮೂಲಕ ಅರ್ಧದಷ್ಟು ಕೆಲಸವನ್ನು ನಿರ್ವಹಿಸುತ್ತಾರೆ. ಸುಮಾರು 7 ಲಕ್ಷ ರೂ.ಗಳನ್ನು 
ನಿರ್ಗತಿಕರು, ಅಶಕ್ತರಿಗೆ ಮಾಸಾಶನ ನೀಡಲು ಬಳಸಲಾಗುತ್ತಿದೆ ಎಂದು ಹೇಳಿದರು.

ತಾಪಂ ಅಧ್ಯಕ್ಷ ಬಿ.ಎಚ್‌.ಮಲ್ಲಿಕಾರ್ಜುನ್‌ ಹಕ್ರೆ ಮಾತನಾಡಿದರು. ಜಿಪಂ ಸದಸ್ಯ ಕಾಗೋಡು ಅಣ್ಣಪ್ಪ, ತಾಪಂ ಸದಸ್ಯೆ ಸವಿತಾ ನಟರಾಜ್‌, ಪಡವಗೋಡು ಗ್ರಾಪಂ ಅಧ್ಯಕ್ಷ ಪಿ.ಡಿ. ಬಂಗಾರಪ್ಪ, ಪ್ರಮುಖರಾದ ಮೋಹನ್‌, ಗುರುಮೂರ್ತಿ, ಚಂದ್ರಶೇಖರ್‌, ಚನ್ನಬಸಪ್ಪಗೌಡ, ಶ್ರೀನಿವಾಸ್‌ ಪಡವಗೋಡು ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next