ಚಾಮರಾಜನಗರ: ಜಿಲ್ಲೆಯಲ್ಲಿ ಕುಷ್ಟರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಿಲ್ಲಾಡಳಿತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಾ ಜಾಥಾ ನಡೆಯಿತು.
ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಾ ಕಾರ್ಯಕ್ರಮಕ್ಕೆ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಸಿರು ನಿಶಾನೆತೋರುವ ಮೂಲಕ ಜಿಪಂ ಅಧ್ಯಕ್ಷರಾದ ಶಿವಮ್ಮ ಚಾಲನೆ ನೀಡಿದರು.
ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಎಂ.ಸಿ.ರಾಜು ಮಾತನಾಡಿ, ಕುಷ್ಠರೋಗ ನಿರ್ಮೂಲನಾ ಕುರಿತು ಅರಿವು ಕಾರ್ಯಕ್ರಮಗಳು ಜ.30 ರಿಂದ ಫೆ.13ರವರೆಗೆ ನಡೆಯಲಿದೆ. ಗಾಂಧೀಜಿ ಅವರು ಕುಷ್ಠರೋಗಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಸಮಾಜದಲ್ಲಿ ಎಲ್ಲರಂತೆಜೀವನ ನಡೆಸಲು ಅವರಲ್ಲಿ ಅರಿವು ಮೂಡಿಸುತ್ತಿದ್ದರು. ಹೀಗಾಗಿ ಮಹಾತ್ಮ ಗಾಂಧಿ ಹುತಾತ್ಮರಾದ ಈ ದಿನದಂದೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕುಷ್ಠರೋಗ ವಾಸಿಯಾಗದೆ ಇರುವ ಕಾಯಿಲೆ ಅಲ್ಲ. ಹೀಗಾಗಿ ಈ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಪ್ರಾರಂಭದಲ್ಲಿ ತಿಳಿ ಬಿಳಿ ತಾಮ್ರದ ಮಚ್ಚೆ ಕಂಡು ಬಂದರೆ ವೈದ್ಯರ ಸಲಹೆ ಪಡೆದು ರೋಗದಿಂದ ಗುಣಮುಖರಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಲಸಿಕಾ ಅಧಿಕಾರಿ ಡಾ.ಕೆ. ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಲಸಿಕಾ ಕಾರ್ಯಕ್ರಮ ವ್ಯವಸ್ಥಾಪಕರಾದ ದುಶ್ಯಂತ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ಜೆಎಸ್‌ಎಸ್ ನರ್ಸಿಂಗ್ ಶಾಲೆ, ಸರ್ಕಾರಿ ನರ್ಸಿಂಗ್ ಶಾಲೆ, ಬಸವ ರಾಜೇಂದ್ರ ನರ್ಸಿಂಗ್ ಶಾಲೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.