ಲಂಡನ್: ಅದೃಷ್ಟ ಯಾವ ರೀತಿ ಒಲಿದು ಬರುತ್ತದೆ ಅನ್ನುವುದೇ ಗೊತ್ತಾಗುವುದಿಲ್ಲ. ಇಂಗ್ಲೆಂಡ್‌ನ ಮಹಿಳೆಯೊಬ್ಬರು ಇಂತಹದ್ದೊಂದು ವಿಚಿತ್ರ ಸಂತಸ ಅನುಭವಿಸುತ್ತಿದ್ದಾರೆ.
ಆಕೆ ಯಾವತ್ತೋ ಒಂದು ದಿನ ಪೂರ್ವ ಸಸೆಕ್ಸ್‌ನ ಅಂಗಡಿಯೊಂದರಿಂದ ಕೇವಲ 5 ಯೂರೋಗೆ (500 ರೂ.) ಒಂದು ಕುರ್ಚಿ ಕೊಂಡಿದ್ದರು. ಒಮ್ಮೆ ಆಕೆ ಅದನ್ನು ಸೂಕ್ತ ವ್ಯಕ್ತಿಗೆ ಕೊಟ್ಟು ಪರಿಶೀಲನೆ ನಡೆಸಿದಾಗ, ಅದು 20ನೇ ಶತಮಾನದ ಆರಂಭದಲ್ಲಿ ಆಸ್ಟ್ರಿಯಾದಲ್ಲಿ ತಯಾರಾದ, ಬಹಳ ಕಲಾತ್ಮಕ ಮೌಲ್ಯದ ಹೊಂದಿದ ಕುರ್ಚಿ ಎನ್ನುವುದು ಖಚಿತವಾಯಿತು.
ಸ್ವೊರ್ಡರ್ಸ್ ಆ್ಯಕ್ಷನೀರ್ಸ್‌ನಲ್ಲಿ ಅದನ್ನು ಹರಾಜಿನಲ್ಲಿಟ್ಟಾಗ ಆಸ್ಟ್ರಿಯಾದ ವ್ಯಕ್ತಿಯೊಬ್ಬರು ಅದನ್ನು 16,250 ರೂ.ಗೆ (16.4 ಲಕ್ಷ ರೂ.)ಕೊಂಡರು. ಇದ್ದಕ್ಕಿದ್ದಂತೆ ಕುರ್ಚಿಗೆ ಬಂದ ಈ ಮೌಲ್ಯ ನೋಡಿ ಮಹಿಳೆಯೇ ದಂಗಾಗಿದ್ದಾರೆ.