ನವದೆಹಲಿ: ಲಂಡನ್‌ನಲ್ಲಿ ಇರುವ ಭಾರತದ ಹೈಮಿಕಷನ್ ಕಚೇರಿ ಮೇಲೆ ಖಲಿಸ್ತಾನಿ ಬೆಂಬಲಿಗರ ದಾಳಿ ವೇಳೆ ಯು.ಕೆ. ಸರ್ಕಾರ ಸೂಕ್ತ ಭದ್ರತೆ ನೀಡಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಆ ದೇಶದ ಸರ್ಕಾರ ಕೈ ಕಟ್ಟಿ ಕುಳಿತಿದೆ. ಜತೆಗೆ ಭದ್ರತೆ ವಿಚಾರದಲ್ಲಿ ಪಕ್ಷಪಾತ ಧೋರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಇಂಥ ಮನಸ್ಥಿತಿಯನ್ನು ಒಪ್ಪಿಕೊಳ್ಳುವುದು ಅಸಾಧ್ಯ. ಇತರ ದೇಶಗಳ ರಾಯಭಾರ ಅಥವಾ ಹೈಕಮಿಷನ್ ಕಚೇರಿಗಳಿಗೆ ಭದ್ರತೆ ನೀಡುವ ಅಂಶವನ್ನು ಆಯಾ ದೇಶದ ಸರ್ಕಾರಗಳೇ ಖಾತರಿಪಡಿಸಬೇಕು ಎಂದರು. ಭದ್ರತೆಯಲ್ಲಿ ನಮ್ಮ ದೇಶದವರಿಗೆ ಮೊದಲ ಆದ್ಯತೆ, ನಂತರ ಬೇರೆ ದೇಶದ ರಾಯಭಾರಿಗಳಿಗೆ ಎನ್ನುವಂಥ ಮನಸ್ಥಿತಿ ಇರ ಕೂಡದು. ಈ ನಿಟ್ಟಿನಲ್ಲಿ ಯು.ಕೆ. ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು
ಇದೇ ವೇಳೆ, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿನ ಭಾರತದ ದೂತಾವಾಸ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ಖಂಡಿಸಿ ಭಾರತೀಯ ಅಮೆರಿಕನ್ ಸಮುದಾಯದವರು ಮೆರವಣಿಗೆ ನಡೆಸಿದರು.