Advertisement

ವನಿತಾ ವಿಶ್ವ ಬಾಕ್ಸಿಂಗ್‌: ಸರಿತಾದೇವಿಗೆ ಸೋಲು

10:55 AM Oct 09, 2019 | sudhir |

ಹೊಸದಿಲ್ಲಿ: ರಶ್ಯದಲ್ಲಿ ನಡೆಯುತ್ತಿರುವ ವನಿತಾ ವಿಶ್ವ ಬಾಕ್ಸಿಂಗ್‌ ಕೂಟದಲ್ಲಿ ಭಾರತದ ಮಾಜಿ ಚಾಂಪಿಯನ್‌ ಸರಿತಾದೇವಿ ಸೋಲನುಭವಿಸಿದ್ದಾರೆ. 60 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದ ಅವರು, 32ರ ಸುತ್ತಿನ ಮುಖಾಮುಖೀಯಲ್ಲಿ ರಶ್ಯದ ನತಾಲಿಯಾ ಶದ್ರಿನಾ ವಿರುದ್ಧ 0-5 ಅಂತರದಿಂದ ಎಡವಿದರು. 4ನೇ ಶ್ರೇಯಾಂಕದ ಸರಿತಾಗೆ ಮೊದಲ ಸುತ್ತಿನ ಬೈ ಲಭಿಸಿತ್ತು.

Advertisement

ದಿಲ್ಲಿಯಲ್ಲಿ ನಡೆದ 2006ರ ವಿಶ್ವ ಕೂಟದಲ್ಲಿ ಚಿನ್ನದ ಪದಕ ಗೆದ್ದ ಹಿರಿಮೆ ಸರಿತಾದೇವಿ ಅವರದ್ದಾಗಿದೆ. 13 ವರ್ಷಗಳ ಬಳಿಕ ಇದೇ ಸಾಧನೆಯನ್ನು ಪುನರಾವರ್ತಿಸುವ ಯೋಜನೆಯಲ್ಲಿದ್ದರು. ಆರಂಭಿಕ ಸುತ್ತಿನ ಮೊದಲ 3 ನಿಮಿಷ ಸರಿತಾ ಹಿಡಿತ ಸಾಧಿಸಿದ್ದರು. ಆದರೆ ಮುಂದಿನ 2 ಸುತ್ತುಗಳ ಕಾದಾಟದಲ್ಲಿ ಶದ್ರಿನಾ ಅಮೋಘ ರೀತಿಯಲ್ಲಿ ತಿರುಗಿ ಬಿದ್ದರು. ಭಾರತೀಯಳ ಆಟ ನಡೆಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next