ಹೊಸದಿಲ್ಲಿ: ವನಿತಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನೀತು, ಪ್ರೀತಿ ಮತ್ತು ಮಂಜು ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
Advertisement
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದ ನೀತು ಗಂಘಾಸ್ (48 ಕೆಜಿ) ಕೊರಿಯಾದ ಡೊಯೇನ್ ಕಾಂಗ್ ಅವರನ್ನು ಮಣಿಸಿದರು. 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರೀತಿ ರೊಮೇನಿಯಾದ ಲಾಕ್ರಾಮಿಯೋರಾ ಪೆರಿಜೊಕ್ ವಿರುದ್ಧ ಜಯ ಸಾಧಿಸಿದರು. ಮಂಜು ಬಂಬೋರಿಯಾ (66ಕೆಜಿ) ನ್ಯೂಜಿಲ್ಯಾಂಡ್‌ನ ಕಾರಾ ವರೆರಾ ಅವರಿಗೆ 5-0 ಅಂತರದಿಂದ ಆಘಾತವಿಕ್ಕಿದರು.