ಹೊಸದಿಲ್ಲಿ: ವನಿತಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಲವ್ಲಿನಾ ಬೊರ್ಗೊಹೇನ್ ಮತ್ತು ಸಾಕ್ಷಿ ಚೌಧರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇಬ್ಬರದೂ 5-0 ಅಂತರದ ಗೆಲುವಾಗಿತ್ತು.
Advertisement
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ (75 ಕೆಜಿ) ಮೆಕ್ಸಿಕೋದ ವ್ಯಾನೆಸ್ಸಾ ಓರ್ಟಿಝ್ ಅವರನ್ನು ಮಣಿಸಿದರೆ, 54 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದ ಸಾಕ್ಷಿ ಚೌಧರಿ ಕಜಾಕ್‌ಸ್ಥಾನದ ಝಜೀರಾ ಯುರಕ್‌ಬಯೇವಾ ಅವರನ್ನು ಪರಾಭವಗೊಳಿಸಿದರು. ಆದರೆ 54 ಕೆಜಿ ವಿಭಾಗದ ಮತ್ತೋರ್ವ ಸ್ಪರ್ಧಿ, 19 ವರ್ಷದ ಪ್ರೀತಿ ಥಾಯ್ಲೆಂಡ್‌ನ ಜುಟಾಮಸ್ ವಿರುದ್ಧ 3-4 ಅಂತರದ ಸೋಲು ಕಂಡರು.