Advertisement

ಮಹಿಳಾ ದೌರ್ಜನ್ಯ ತಡೆ ಕಾಯೆ: ಜಾಗೃತಿ ಜಾಥಾ

11:14 AM Oct 13, 2021 | Team Udayavani |

ಶಹಾಬಾದ: ಪುರುಷ ಪ್ರಧಾನ ಸಮಾಜದಲ್ಲಿ ಒಂದಲ್ಲ ಒಂದು ಕಾರಣಕ್ಕೆ ಮಹಿಳೆಯರ ಮೇಲೆ ನಿರಂತರವಾದ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಅತ್ಯಾಚಾರ ಹಾಗೂ ಮಕ್ಕಳ ಸಾಗಣೆ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಮಹಿಳಾ ದೌರ್ಜನ್ಯ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಮಾರ್ಗದರ್ಶಿ ಸಂಸ್ಥೆಯ ಯಲ್ಲುಬಾಯಿ ಎಸ್. ಮರತೂರ ಹೇಳಿದರು.

Advertisement

ಮಂಗಳವಾರ ಮರತೂರ ಗ್ರಾಮದಲ್ಲಿ ದೀಹಂಗರ್‌ ಪ್ರೊಜೆಕ್ಟ್ ಮಾರ್ಗದರ್ಶಿ ಸಂಸ್ಥೆ ಕಲಬುರಗಿ ಮತ್ತು ಮಹಿಳಾ ಜಾಗೃತ ವೇದಿಕೆ ಆಯೋಜಿಸಲಾಗಿದ್ದ ದೌರ್ಜನ್ಯ ಮುಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಮತ್ತು ಮಕ್ಕಳ ಕಳ್ಳಸಾಗಣೆಗೆ ಮಹಿಳೆಯರೇ ಸಹಾಯ ಮಾಡುತ್ತಿರುವುದು ವಿಷಾಧನೀಯ. ಅಪರಿಚಿತರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಉದ್ಯೋಗ ಕೊಡಿಸುವ ನೆಪದಲ್ಲಿ ದೂರದ ಊರುಗಳಿಗೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆಗೆ ಮಾರಾಟ ಮಾಡುವುದು ಕಂಡುಬರುತ್ತಿದೆ. ಇಂತಹ ನಯವಂಚಕರ ಬಗ್ಗೆ ಎಚ್ಚರದಿಂದಿರಬೇಕು ಎಂದರು.

ಇದನ್ನೂ ಓದಿ: ಸಂಪ್ರದಾಯದಂತೆ ಬಸ್‌ಗಳ ಪೂಜೆ

ದೌರ್ಜನ್ಯದಿಂದ ಸಂಕಷ್ಟಗಳಿಗೆ ಸಿಲುಕಿರುವ ಅಸಹಾಯಕ ಮಹಿಳೆಯರು ಸಾಂತ್ವನ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿ ದೊರೆಯುವ ಉಚಿತ ಸೌಲಭ್ಯಗಳ ಬಗ್ಗೆ ವಿವರಿಸಿದ ಅವರು, ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಮಹಿಳಾ ಸಹಾಯವಾಣಿಯ ದೂರವಾಣಿ ಸಂಖ್ಯೆ 1091ಕ್ಕೆ ಕರೆಮಾಡಿ ಸಲಹೆ ಹಾಗೂ ನೆರವು ಪಡೆಯಬಹುದು. ನೇರವಾಗಿ ಯಾವುದೇ ತಾಲೂಕಿನ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳನ್ನು ಅಥವಾ ಸಮೀಪದ ಪೊಲೀಸ್‌ ಠಾಣೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

Advertisement

ಮರತೂರ ಗ್ರಾಪಂ ಸದಸ್ಯೆ ಶಕುಂತಲಾ ತಮ್ಮಣ್ಣ, ಮರತೂರ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪ್ರಭಾವತಿ ಮರತೂರ, ಆಶಾ ಕಾರ್ಯಕರ್ತೆ ಶೋಭಾ, ಬಾಲ್ಯ ವಿವಾಹ ತಡೆ ನಾಯಕಿಯರಾದ ಸುಜಾತ, ಸುಮಾ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next