ರಾಯಚೂರು: ರಾಜ್ಯದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇ ಧಿಸುವಂತೆ ಆಗ್ರಹಿಸಿ ರಾಜ್ಯ ಮಹಿಳಾ ಒಕ್ಕೂಟದ
ಸದಸ್ಯರು ಶುಕ್ರವಾರ ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟಿಸಿದರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ಠ್ ಅವರಿಗೆ ಮನವಿ ಸಲ್ಲಿಸಿದ ಸದಸ್ಯರು, ಮದ್ಯಪಾನದಿಂದ
ಬಡ ಕುಟುಂಬಗಳು ಹಾಳಾಗುತ್ತಿವೆ. ದುಡಿದ ಹಣವೆಲ್ಲ ಕುಡಿದು ಹಾಳು ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ
ಮದ್ಯಪಾನ ನಿಷೇ ಧಿಸುವಂತೆ ಆಗ್ರಹಿಸಿ ಹಲವು ಹೋರಾಟ ನಡೆಸುತ್ತಲೇ ಬರಲಾಗಿದೆ. ಈ ಕುರಿತು ಜಿಲ್ಲೆಯ ಅನೇಕ
ಗ್ರಾಪಂಗಳಿಗೆ ಮದ್ಯ ಮಾರಾಟ ನಿಷೇಧಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಲಾಗಿದೆ. ಆದರೆ, ಈವರೆಗೂ ಗ್ರಾಮ ಸಭೆ
ನಡೆಸಿಲ್ಲ ಎಂದು ದೂರಿದರು.
ಗ್ರಾಮ ಸಭೆಗಳಲ್ಲಿ ಮದ್ಯ ನಿಷೇಧ ನಿರ್ಣಯ ಕೈಗೊಂಡಿದ್ದಾರೆ. ಆದರೂ ಅಕ್ರಮ ಮದ್ಯ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಅಬಕಾರಿ, ಪೊಲೀಸ್ ಇಲಾಖೆ ಹಾಗೂ ತಾಪಂ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಯಾವುದೇ ಕ್ರಮ ಕೈಗೊಂಡಿಲ್ಲ. ಮದ್ಯಪಾನ ನಿಷೇಧಕ್ಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷÂಧೋರಣೆ ಅನುಸರಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಒಕ್ಕೂಟದ ಸದಸ್ಯರಾದ ಮೋಕ್ಷಮ್ಮ, ರಂಗಮ್ಮ, ವಿರುಪಮ್ಮ, ಗೌರಮ್ಮ, ಮರಿಯಮ್ಮ, ಹುಲಿಗೆಮ್ಮ, ನಿಂಗಮ್ಮ, ಯಮುನಮ್ಮ, ಹುಸೇನಮ್ಮ, ವೆಂಕಟೇಶ, ಹನುಮನಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.