Advertisement

ಐಸಿಸಿ ಟಿ20 ರ್‍ಯಾಂಕಿಂಗ್‌; ಅಗ್ರ 10ರಲ್ಲಿ ಭಾರತದ ಮೂವರು

10:58 AM Oct 05, 2022 | Team Udayavani |

ಹೊಸದಿಲ್ಲಿ: ಐಸಿಸಿ ವನಿತಾ ಟಿ20 ರ್‍ಯಾಂಕಿಂಗ್‌ ಪ್ರಕಟವಾಗಿದ್ದು ಅಗ್ರ 10ರಲ್ಲಿ ಭಾರತದ ಮೂವರು ಆಟಗಾರ್ತಿಯರಿದ್ದಾರೆ. ಭಾರತದ ಜೆಮಿಮಾ ರೋಡ್ರಿಗಸ್‌ ಉತ್ತಮ ರೀತಿಯಲ್ಲಿ ತಮ್ಮ ರ್‍ಯಾಂಕಿಂಗ್‌ ಅನ್ನು ಏರಿಸಿಕೊಂಡರು.

Advertisement

ಸಿಲ್ಹೆಟ್‌ನಲ್ಲಿ ಸಾಗುತ್ತಿರುವ ಏಷ್ಯಾ ಕಪ್‌ ಕೂಟದಲ್ಲಿ ಜೆಮಿಮಾ ರೋಡ್ರಿಗಸ್‌ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು 53 ಎಸೆತಗಳಿಂದ 76 ರನ್‌ ಗಳಿಸಿದ್ದರು. ಈ ಸಾಧನೆಯಿಂದಾಗಿ ಅವರು ನಾಲ್ಕು ಸ್ಥಾನ ಮೇಲಕ್ಕೇರಿದ್ದು ಎಂಟನೇ ಸ್ಥಾನದಲ್ಲಿದ್ದಾರೆ. ಅವರು ಮಂಗಳವಾರ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ 75 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು.

ಇದನ್ನೂ ಓದಿ:ಕ್ಯಾಚ್ ಹಿಡಿದು ಬೌಂಡರಿ ಗೆರೆ ತುಳಿದ ಸಿರಾಜ್ ಗೆ ನಿಂದಿಸಿದ ದೀಪಕ್; ವಿಡಿಯೋ ನೋಡಿ

ಭಾರತದ ಸ್ಮತಿ ಮಂಧನಾ ಮತ್ತು ಶಫಾಲಿ ವರ್ಮ ಅಗ್ರ ಹತ್ತರೊಳಗೆ ಇರುವ ಇನ್ನಿಬ್ಬರು ಭಾರತೀಯ ಆಟಗಾರ್ತಿಯರಾಗಿದ್ದಾರೆ. ಸ್ಮತಿ ಮಂಧನಾ ಮೂರನೇ ಸ್ಥಾನದಲ್ಲಿದ್ದರೆ ಶಫಾಲಿ ವರ್ಮ ಏಳನೇ ಸ್ಥಾನದಲ್ಲಿದ್ದಾರೆ. ಮುಂಬಯಿಯ ರೋಡ್ರಿಗಸ್‌ ನಾಲ್ಕು ರ್‍ಯಾಂಕ್ ಮೇಲೇರಿ ಎಂಟನೇ ಸ್ಥಾನದಲ್ಲಿದ್ದಾರೆ.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಎರಡು ಸ್ಥಾನ ಮೇಲಕ್ಕೇರಿದ್ದು 13ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಬೆತ್‌ ಮೂನಿ ಮತ್ತು ಮೆಗ್‌ ಲ್ಯಾನಿಂಗ್‌ ಮೊದಲೆರಡು ಸ್ಥಾನದಲ್ಲಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next