Advertisement

ಇಂದು ಮಹಿಳಾ ಪ್ರೀಮಿಯರ್‌ ಲೀಗ್‌ ಹರಾಜು: ಮಹಿಳಾ ಟಿ20 ಕೂಟಕ್ಕೆ ಆಟಗಾರ್ತಿಯರ ಆಯ್ಕೆ

11:22 PM Feb 12, 2023 | Team Udayavani |

ಮುಂಬಯಿ: ಭಾರ ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೇ ಮೊದಲ ಬಾರಿಗೆ ಆಯೋಜಿಸಿರುವ ಮಹಿಳಾ ಪ್ರೀಮಿಯರ್‌ ಲೀಗ್‌ ಟಿ20 ಕೂಟಕ್ಕೆ ಆಟಗಾರ್ತಿಯರ ಹರಾಜು ಸೋಮವಾರ ನಡೆಯಲಿದೆ.

Advertisement

ಮುಂಬಯಿಯ ಜಿಯೋ ಸೆಂಟರ್‌ನಲ್ಲಿ 409 ಆಟಗಾರ್ತಿಯರ ಹೆಸರು ಹರಾ ಜಿನ ವೇಳೆ ಪ್ರಸ್ತಾವವಾಗಲಿದೆ. ಈ ಪೈಕಿ 243 ಭಾರತೀಯರು, 163 ವಿದೇಶೀಯರು (ಐಸಿಸಿ ಸಹ ಸದಸ್ಯ ರಾಷ್ಟ್ರಗಳ 8 ಮಂದಿ ಸೇರಿ) ಇದ್ದಾರೆ.

ಮಾ.4ರಿಂದ 26ರ ವರೆಗೆ ಐದು ತಂಡಗಳು ಮುಂಬಯಿಯ ಎರಡು ಮೈದಾನಗಳಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ. ಕೂಟ ಇನ್ನೂ ಆರಂಭ ವಾಗಿಲ್ಲ, ಆಗಲೇ ವಿಶ್ವದ 2ನೇ ಶ್ರೀಮಂತ ಟಿ20 ಲೀಗ್‌ ಎಂದು ಪಟ್ಟಿಯಲ್ಲಿ ಸೇರಿದೆ. ಐಪಿಎಲ್‌ ಅನಂತರ ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಶ್ರೀಮಂತಿಕೆಯಲ್ಲಿ ದೊಡ್ಡ ಸ್ಥಾನ ಸಿಕ್ಕಿದೆ. ಈ ಪೈಪೋಟಿಯಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್‌ ಪುರುಷರ ಲೀಗ್‌ಗಳನ್ನೂ ಹಿಂದಿಕ್ಕಿದೆ!

ಈ ಕೂಟದಲ್ಲಿ ಪಾಲ್ಗೊಳ್ಳುವ ತಂಡಗಳಾದ ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗ ಳೂರು, ಡೆಲ್ಲಿ ಕ್ಯಾಪಿಟಲ್ಸ್‌, ಲಕ್ನೋ ವಾರಿಯರ್ಸ್‌, ಗುಜರಾತ್‌ ಜೈಂಟ್ಸ್‌ (ಅಹ್ಮದಾಬಾದ್‌) ತಂಡಗಳು ಹರಾಜಿನಲ್ಲಿ ಆಟಗಾರ್ತಿಯರನ್ನು ಖರೀದಿಸಲಿವೆ.

ಯಾರ ಮೇಲೆ ನಿರೀಕ್ಷೆ
ಭಾರತೀಯರ ಪೈಕಿ ಹರ್ಮನ್‌ಪ್ರೀತ್‌ ಕೌರ್‌, ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗ್ಸ್‌, ದೀಪ್ತಿ ಶರ್ಮ, ಸ್ನೇಹ್‌ ರಾಣಾ, ವಿದೇಶೀಯರ ಪೈಕಿ ಅಲಿಸ್ಸಾ ಹೀಲಿ, ಸೋಫಿ ಎಕಲ್‌ಸ್ಟೋನ್‌, ನ್ಯಾಟ್‌ ಸ್ಕಿವರ್‌, ಮೆಗ್‌ ಲ್ಯಾನಿಂಗ್‌ ಗರಿಷ್ಠ 50 ಲಕ್ಷ ರೂ. ಮೂಲಬೆಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇವರನ್ನು ಕೊಳ್ಳಲು ಫ್ರಾಂಚೈಸಿಗಳು ಭಾರೀ ಪೈಪೋಟಿ ನಡೆಸುವುದು ಖಾತ್ರಿ. ಕೋಟಿ ರೂ.ಗಳಿಗಿಂತ ಹೆಚ್ಚಿನ ಬೆಲೆಗೆ ಅವರು ಮಾರಾಟವಾಗುವ ಸಾಧ್ಯತೆಯಿದೆ.

Advertisement

ಇನ್ನು ಭಾರತದ 19 ವಯೋಮಿತಿ ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯೆಯರಾದ ಪಾರ್ಶ್ವವಿ ಚೋಪ್ರಾ, ಅರ್ಚನಾ ದೇವಿ, ತಿತಾಸ್‌ ಸಾಧು, ಶ್ವೇತಾ ಸೆಹ್ರಾವತ್‌, ಮನ್ನತ್‌ ಕಶ್ಯಪ್‌ 10 ಲಕ್ಷ ರೂ. ಮೂಲಬೆಲೆ ಪಟ್ಟಿಯಲ್ಲಿ ಬರುತ್ತಾರೆ.

ಪ್ರತಿಯೊಂದು ತಂಡವೂ ಆಟ ಗಾರ್ತಿಯರ ಆಯ್ಕೆಗಾಗಿ 12 ಕೋಟಿ ರೂ.ಗಳನ್ನು ಖರ್ಚು ಮಾಡಬಹುದು. ತಂಡದಲ್ಲಿ ಆರು ಮಂದಿ ವಿದೇಶಿ ಆಟಗಾರ್ತಿಯರ ಸಹಿತ 18 ಮಂದಿ ಇರಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next