Advertisement

ವನಿತಾ ಪ್ರೀಮಿಯರ್ ಲೀಗ್ : ಮುಂದುವರಿದ ಆರ್ ಸಿಬಿ ಸೋಲಿನ ಸರಣಿ

10:20 PM Mar 10, 2023 | Team Udayavani |

ಮುಂಬೈ : ಇಲ್ಲಿನ ಬ್ರಬೋರ್ನ್ ಸ್ಟೇಡಿಯಂ ನಲ್ಲಿ ಶುಕ್ರವಾರ ನಡೆದ ವನಿತಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿದ್ದು, ಯುಪಿ ವಾರಿಯರ್ಸ್ 10 ವಿಕೆಟ್‌ಗಳಿಂದ  ಅಮೋಘ ಜಯ ಸಾಧಿಸಿದೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 19.3 ಓವರ್ ಗಳಲ್ಲಿ 138 ರನ್ ಗಳಿಗೆ ಆಲೌಟ್ ಆಗಿ ಕಳಪೆ ಆಟಕ್ಕೆ ಸಾಕ್ಷಿಯಾಗಿ ಸಣ್ಣ ಗುರಿಯನ್ನು ಯುಪಿ ವಾರಿಯರ್ಸ್ ಮುಂದಿಟ್ಟಿತು. ನಾಯಕಿ ಸ್ಮೃತಿ ಮಂಧಾನ 4 ರನ್ ಗಳಿಸಿ ಔಟಾಗುವ ಮೂಲಕ ಮತ್ತೆ ವೈಫಲ್ಯ ಅನುಭವಿಸಿದರು. ಎಸ್ ಡಿವೈನ್ 36,ಎಲ್ಲಿಸ್ ಪೆರ್ರಿ 52 ರನ್ ಗಳಿಸಿ ಔಟಾದರು. ಶ್ರೇಯಾಂಕಾ ಪಾಟೀಲ್ 15, ಎರಿನ್ ಬರ್ನ್ಸ್ 12 ರನ್ ಹೊರತು ಪಡಿಸಿ ಉಳಿದ ಆಟಗಾರ್ತಿಯರು ಒಂದಂಕಿ ದಾಟಲಿಲ್ಲ. ಯುಪಿ ಪರ ಬಿಗಿ ಬೌಲಿಂಗ್ ನಡೆಸಿದ ಎಕ್ಲೆಸ್ಟೋನ್ 3.3 ಓವರ್ ಗಳಲ್ಲಿ13 ರನ್ ನೀಡಿ 4 ವಿಕೆಟ್ ಕಬಳಿಸಿದರು.

ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ತಂಡದ ನಾಯಕಿ ಮತ್ತು ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಅಮೋಘ ಆಟವಾಡಿದರು. ಆರಂಭಿಕ ಆಟಗಾರ್ತಿ ಅಜೇಯ 96 ರನ್ ಗಳಿಸಿದರು. 47 ಎಸೆತಗಳಲ್ಲಿ 18 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಅವರಿಗೆ ಭರ್ಜರಿ ಸಾಥ್ ನೀಡಿದ ದೇವಿಕಾ ವೈದ್ಯ 31 ಎಸೆತಗಳಲ್ಲಿ 36 ರನ್ ಕೊಡುಗೆ ನೀಡಿದರು.

ಆರ್ ಸಿಬಿ ಆಡಿದ 4 ಪಂದ್ಯಗಲ್ಲಿ 4 ರಲ್ಲೂ ಸೋಲು ಅನುಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next