ನವದೆಹಲಿ: ಬಹುನಿರೀಕ್ಷೆಯ ಮಹಿಳೆಯರ ಚಾಲೆಂಜರ್ ಸರಣಿ ಯುಎಇಯಲ್ಲಿ ನ.4ರಿಂದ 9ರ ತನಕ ನಡೆಯಲಿದೆ ಎಂದು ಐಪಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದು ಮೂರು ತಂಡಗಳ ನಡುವೆ ನಡೆಯುವ “ಕಿರು ಐಪಿಎಲ್’ ಪಂದ್ಯಾವಳಿಯಾಗಿದೆ. ವೆಲಾಸಿಟಿ, ಸೂಪರ್ ನೋವಾ ಹಾಗೂ ಟ್ರೈಲ್ ಬ್ಲೇಜರ್ ತಂಡಗಳು ಪಾಲ್ಗೊಳ್ಳಲಿವೆ.
ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಮೂರು ತಂಡಗಳು ಎದುರಾಳಿಯ ವಿರುದ್ಧ ಒಂದು ಪಂದ್ಯ ಆಡಲಿದ್ದು, ಹೆಚ್ಚು ಪಂದ್ಯ ಗೆದ್ದ ಎರಡು ತಂಡಗಳು ಫೈನಲ್ ಆಡಲಿದೆ. ಕೂಟದಲ್ಲಿ ಒಟ್ಟು ನಾಲ್ಕು ಪಂದ್ಯಗಳು ಮಾತ್ರ ನಡೆಯಲಿದೆ.
ಇದನ್ನೂ ಓದಿ:ಮುಂಬೈ-ಪಂಜಾಬ್: ಇತ್ತಂಡಗಳಿಗೂ “ಸೂಪರ್’ ಸೋಲಿನ ಅನುಭವ, ಎದ್ದು ನಿಲ್ಲುವವರ್ಯಾರು?
ನವೆಂಬರ್ 9ರಂದು ಮಹಿಳಾ ಕೂಟದ ಫೈನಲ್ ನಡೆಯಲಿದೆ. ಅದರ ಮರುದಿನ ಅಂದರೆ ನವೆಂಬರ್ 10ರಂದು ಪುರುಷರ ಐಪಿಎಲ್ ನ ಫೈನಲ್ ನಡೆಯಲಿದೆ.