ಮಾಡಬೇಕು. ಬದಲಾಗಿ ಆಮಿಷ ಹಾಗೂ ಪೂರ್ವಾಗ್ರಹಗಳಿಗೆ ಬಲಿಯಾಗಬಾರದು ಎಂದು ರಾಜ್ಯ ಹಿಂದುಳಿದ ವರ್ಗಗಳ
ಆಯೋಗದ ಮಾಜಿ ಅಧ್ಯಕ್ಷ ರವಿವರ್ಮ ಕುಮಾರ ಹೇಳಿದರು.
Advertisement
ಶನಿವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಡಾ| ಬಿ.ಆರ್. ಅಂಬೇಡ್ಕರ್ ಅಧ್ಯಯನಕೇಂದ್ರದಲ್ಲಿ ಪ.ಜಾ.-ಪ.ಪಂ. ಘಟಕ, ಸಮಾನ ಅವಕಾಶ ಕೋಶ ಮತ್ತು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಇವರ ಸಂಯುಕ್ತಾಶ್ರಯದಲ್ಲಿ ಡಿ.ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಮತ್ತು ಮಹಿಳೆಯರ ಸಬಲೀಕರಣ ವಿಶೇಷ ಉಪನ್ಯಾಸ ಮತ್ತು ಪ.ಜಾ-ಪ.ಪಂ. ಸಂಶೋಧನಾ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಸಬಿಹಾ ಮಾತನಾಡಿ, ದೇವರಾಜ ಅರಸು ಅವರು ಜಾತಿ ಮತ್ತು ವರ್ಗ ಅಸಮಾನತೆ ಹೊಗಲಾಡಿಸುವಲ್ಲಿ ಹಗಲಿರುಳು ಶ್ರಮಿಸಿದವರು. ಈ ನಿಟ್ಟಿನಲ್ಲಿ ರವಿವರ್ಮ ಕುಮಾರ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕುಲಸಚಿವ ಕೆ.ಪಿ. ಶ್ರೀನಾಥ, ಸಮಾನ ಅವಕಾಶ ಘಟಕದ ಸಂಯೋಜಕ ಡಾ|ಶ್ರೀನಿವಾಸ ವೇದಿಕೆಯಲ್ಲಿದ್ದರು. ಈ ವೇಳೆ ಪ.ಜಾ-ಪ.ಪಂ. ಸಂಶೋಧನಾ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು.
ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಮತ್ತು ಕ್ರಾಂತಿ ಗೀತೆ ಹಾಡಿದರು. ಪ.ಜಾ.-ಪ.ಪಂ. ಘಟಕದ ನಿರ್ದೇಶಕ ಡಾ|ಸಕ್ಪಾಲ್ ಹೂವಣ್ಣ ಸ್ವಾಗತಿಸಿದರು.
ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕ ಓಂಕಾರ ಕಾಕಡೆ ಪರಿಚಯಿಸಿದರು. ಸಹಾಯಕ ನಿರ್ದೇಶಕ ಡಾ| ಹನುಮಂತಯ್ಯ ಪೂಜಾರಿ ನಿರೂಪಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪ್ರತಿಭಾ ವಂದಿಸಿದರು