Advertisement

ಮಹಿಳಾ ದಿನಾಚರಣೆ: ಕಾಟಾಚಾರಕ್ಕೆ ನಡೆದ ಮಹಿಳಾ ಕ್ರೀಡಾಕೂಟ

12:27 PM Mar 05, 2017 | Team Udayavani |

ಎಚ್‌.ಡಿ.ಕೋಟೆ: ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕ್ರೀಡಾಕೂಟ ನಡೆಯಿತು.

Advertisement

ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸ್ತ್ರೀ ಶಕ್ತಿ ಒಕ್ಕೂಟ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರದ ಆದೇಶದಂತೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರನ್ನು ಹೊರತು ಪಡಿಸಿದರೆ ಬೆರಳೆಣಿಕೆಯಷ್ಟು ಮಂದಿ ಸ್ವಯಂ ಸೇವಕರು ಮಾತ್ರ ಭಾಗವಹಿಸಿದ್ದರು.

ಸರ್ಕಾರ ಆದೇಶ ಹೊರಡಿಸಿದ್ದರಿಂದ ಮಹಿಳೆಯರಿಗಾಗಿ ಕ್ರೀಡಾಕೂಟ ನಡೆಸಬೇಕೆನ್ನುವ ಕಾಟಾಚಾರದ ಕ್ರೀಡಾಕೂಟ ಆಯೋಜಿಸಿದ್ದು ಕಂಡು ಬಂತು. ಕ್ರೀಡಾಕೂಟ ಸ್ಥಳದಲ್ಲಿ ಯಾವೊಬ್ಬ ಅಧಿಕಾರಿಗಳೂ ಭಾಗವಹಿಸಿರಲಿಲ್ಲ, ಒಬೊಬ್ಬ ಅಧಿಕಾರಿಗಳು ಸಭೆ ಸಮಾರಂಭದ ಸಬೂಬು ಹೇಳಿ ಕ್ರೀಡಾಕೂಟದಲ್ಲಿ ಬಹುತೇಕ ಭಾಗವಹಿಸಲೇ ಇಲ್ಲ.

ಜೊತೆಗೆ ಕ್ರೀಡಾಕೂಟ ಕೂಡ ಪ್ರಚಾರದ ಕೊರತೆಯಿಂದ ತಾಲೂಕಿನಿಂದ ಬೆರಳೆಕೆಯಷ್ಟು ಮಂದಿ ಮಹಿಳೆಯರು ಮಾತ್ರ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 18 ರಿಂದ 30, 31 ರಿಂದ 45, 46 ರಿಂದ 60 ಹಾಗೂ 60 ವರ್ಷ ಮೇಲ್ಟಟ್ಟ ಮಹಿಳೆಯರಿಗೆ ಪ್ರತ್ಯೇಕವಾದ ಕ್ರೀಡೆಗಳನ್ನು ಆಯೋಜಿಸಿದ್ದು ಕ್ರೀಡೆಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಭಾಗವಹಿಸಿದ್ದರಾದರೂ ವಯಸ್ಕರ ಮಹಿಳೆಯರು ನಾಚುವಂತೆ 60 ವರ್ಷ ಮೇಲ್ವಿಟ್ಟ ಮಹಿಳೆಯರು ಕ್ರೀಡೆಯಲ್ಲಿ ಪ್ರದರ್ಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next