Advertisement
ರಾಯಚೂರು ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಮೂರು ಸೇರಿ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ಕ್ಷೇತ್ರ ಇದಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 16,61,606 ಮತದಾರರಿದ್ದರೆ, ಈ ಬಾರಿ 2.21 ಲಕ್ಷ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಅಂದರೆ 9,39,752 ಪುರುಷ, 9,53,457 ಮಹಿಳಾ ಮತದಾರರು ಸೇರಿ ಒಟ್ಟು 18,93,576 ಮತದಾರರಿದ್ದಾರೆ. ಹೀಗಾಗಿ ಯಾವುದೇ ಪಕ್ಷಗಳು ಮಹಿಳಾ ಮತದಾರರನ್ನು ಒಲಿಸಿಕೊಳ್ಳದೆ ಗೆಲ್ಲುವುದು ಸುಲಭದ ಮಾತಲ್ಲ. ಹೊಸ ಮತದಾರರ ಪೈಕಿ ಸುರಪುರ ವಿಧಾನಸಭೆ ಕ್ಷೇತ್ರದಲ್ಲೇ ಅತಿ ಹೆಚ್ಚು ಅಂದರೆ 53 ಸಾವಿರ ಹೊಸ ಮತದಾರರು ಸೇರಿದ್ದಾರೆ.
ಒಟ್ಟು 2,31,295 ಮತದಾರರಿದ್ದಾರೆ.
Related Articles
Advertisement
ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮಹಿಳೆಯರ ಶಿಕ್ಷಣ ಪ್ರಮಾಣ ಕಡಿಮೆ ಇದೆ. ಬಹುತೇಕರು ಅಶಿಕ್ಷಿತರೇ ಹೆಚ್ಚು. ಕಳೆದ ಚುನಾವಣೆಯಲ್ಲಿ ಸುಮಾರು 4 ಲಕ್ಷಕ್ಕೂ ಅ ಧಿಕ ಮತಗಳು ಚಲಾವಣೆಗೊಂಡಿರಲಿಲ್ಲ. ಇನ್ನು ಈ ಭಾಗದಲ್ಲಿ ಬೇಸಿಗೆ ಬಂದರೆ ಸಾಕು ಬರ ಆವರಿಸಿ ಕೆಲಸವಿಲ್ಲದೇ ಜನ ಗುಳೆ ಹೋಗುವುದು ಸಾಮಾನ್ಯ. ದೇವದುರ್ಗ, ಲಿಂಗಸುಗೂರು ತಾಲೂಕುಗಳಲ್ಲಿನ ತಾಂಡಾಗಳು ಈ ಹೊತ್ತಿಗೆ ಬಣಗುಟ್ಟುತ್ತಿರುತ್ತವೆ. ಇರುವಮಹಿಳೆಯರು ಕೂಡ ಮತದಾನ ದಿನ ಕೂಲಿಗೆ ಹೋಗಿರುವವರೇ ಜಾಸ್ತಿ. ಹೀಗಾಗಿ ಲೆಕ್ಕಕ್ಕೆ ಇದ್ದರೂ ಮಹಿಳೆಯರ ಹಕ್ಕು ಮತಗಳಾಗಿ ಪರಿವರ್ತನೆಗೊಳ್ಳುವುದು ಬಹಳ ಕಷ್ಟಕರ. ಹಕ್ಕು ಚಲಾಯಿಸಿದ ಮತದಾರರು ಇನ್ನು ಕಳೆದ ಚುನಾವಣೆಯ ಅವಲೋಕನ ಮಾಡುವುದಾದರೆಒಟ್ಟು 16,61,606 ಮತದಾರರಲ್ಲಿ 9,68,513 ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದರು. ಅದರಲ್ಲಿ 13,334 ಮತಗಳು ತಿರಸ್ಕೃತಗೊಂಡಿದ್ದವು. 5,01,122 ಪುರುಷರು, 4,67,391 ಮಹಿಳೆಯರು ಹಕ್ಕು ಚಲಾಯಿಸಿದ್ದರು. ಅಂದರೆ 6,93,093 ಮತದಾರರು ತಮ್ಮ ಹಕ್ಕು ಚಲಾಯಿಸಿರಲಿಲ್ಲ. ವಿಜೇತ ಅಭ್ಯರ್ಥಿ ಬಿ.ವಿ ನಾಯಕ 4,43,659, ಪರಾಜಿತ ಅಭ್ಯರ್ಥಿ ಕೆ.ಶಿವನಗೌಡ ನಾಯಕ 4,42,160 ಮತಗಳನ್ನು ಪಡೆದಿದ್ದರು.
ಸಿದ್ದಯ್ಯ ಸ್ವಾಮಿ ಕುಕುನೂರು