ಹೊಸದಿಲ್ಲಿ: ಮಂಗಳವಾರ ಆರಂಭಗೊಂಡ 2022-23ನೇ ಸಾಲಿನ ರಣಜಿ ಕ್ರಿಕೆಟ್ ಪಂದ್ಯಾವಳಿಯ 5ನೇ ಸುತ್ತಿನಲ್ಲಿ ನೂತನ ಇತಿಹಾಸವೊಂದು ನಿರ್ಮಾಣಗೊಂಡಿದೆ. ಪ್ರತಿಷ್ಠಿತ ರಣಜಿ ಚರಿತ್ರೆಯಲ್ಲಿ ಮೊದಲ ಬಾರಿಗೆ ವನಿತಾ ಅಂಪಾಯರ್ ತೀರ್ಪು ನೀಡಲು ಕಣಕ್ಕಿಳಿದರು.
ಇವರೆಂದರೆ ವೃಂದಾ ರತಿ, ಜನನಿ ನಾರಾಯಣನ್, ಗಾಯತ್ರಿ ವೇಣು ಗೋಪಾಲನ್. ಇವರಲ್ಲಿ ವೃಂದಾ ಮಾಜಿ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಕ್ರಿಕೆಟರ್ ಆಗಿದ್ದಾರೆ.
ಗಾಯದ ಸಮಸ್ಯೆಯಿಂದ ಇವರ ಕ್ರಿಕೆಟ್ ಬದುಕು ಅಕಾಲಿಕ ಅಂತ್ಯ ಕಂಡಿತ್ತು. ವೃಂದಾ ರತಿ ಗೋವಾ-ಪುದುಚೇರಿ ನಡುವಿನ ಪಂದ್ಯದಲ್ಲಿ ತೀರ್ಪು ನೀಡಲು ಆಯ್ಕೆಯಾದರು.
ಜನನಿ ನಾರಾಯಣನ್ ರೈಲ್ವೇಸ್- ತ್ರಿಪುರ ನಡುವಿನ ಸೂರತ್ ಪಂದ್ಯದಲ್ಲಿ, ಗಾಯತ್ರಿ ವೇಣುಗೋಪಾಲ್ ಜಮ್ಶೆಡ್‌ಪುರದಲ್ಲಿ ಆರಂಭಗೊಂಡ ಜಾರ್ಖಂಡ್-ಛತ್ತೀಸ್‌ಗಢ ನಡುವಿನ ಪಂದ್ಯದಲ್ಲಿ ಕಣಕ್ಕಿಳಿದರು.
Related Articles
ಈಗಾಗಲೇ ಇಂಗ್ಲೆಂಡ್, ಆಸ್ಟ್ರೇಲಿ ಯದಲ್ಲೆಲ್ಲ ಪುರುಷರ ಕ್ರಿಕೆಟ್‌ನಲ್ಲಿ ವನಿತೆಯರು ಅಂಪಾಯರಿಂಗ್ ನಡೆ ಸುವುದು ಮಾಮೂಲಾಗಿದೆ. ಆದರೆ ಭಾರತ ಈ ವಿಷಯದಲ್ಲಿ ಬಹಳ ಹಿಂದಿದೆ.
ಬಿಸಿಸಿಐ ಇನ್ನೂ ಅನೇಕ ಮಂದಿ ಮಹಿಳೆಯರಿಗೆ ಅಂಪಾ ಯರ್ ಅವಕಾಶ ನೀಡುವ ಯೋಜನೆ ಯನ್ನೇನೋ ಹಾಕಿ ಕೊಂಡಿದೆ. ಆದರೆ ಈಗಾಗಲೇ ನೋಂದಾವಣೆ ಗೊಂಡಿರುವ 150 ಅಂಪಾಯರ್‌ಗಳಲ್ಲಿ ವನಿತೆಯರ ಸಂಖ್ಯೆ ಕೇವಲ ಮೂರು!