Advertisement

ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು: ಉಮಾಶ್ರೀ

07:16 PM Jul 27, 2022 | Team Udayavani |

ರಬಕವಿ-ಬನಹಟ್ಟಿ: ಮಹಿಳೆಯರು ತಮ್ಮ ಹಕ್ಕುಗಳ ಮೊಟಕುಗೊಳಿಸುವ ನಿಟ್ಟಿನಲ್ಲಿ ನಾವು ಹೋರಾಡಬೇಕಾಗಿದೆ ಮತ್ತು ಹೆಚ್ಚಿನ ಹಕ್ಕುಗಳಿಗೆ ಮಹಿಳೆಯರು ಬೇಡಿಕೆಯನ್ನು ಸಲ್ಲಿಸಬೇಕಾಗಿದೆ. ಮಹಿಳೆಯರು ಪ್ರಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳದೆ ಹೋದರೆ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

Advertisement

ಬನಹಟ್ಟಿಯ ಎಸ್‌ಟಿಸಿ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾಜದಲ್ಲಿಯ ಮಹಿಳೆ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ,ಸೃಷ್ಟಿಯ ನಿಯಮದಲ್ಲಿ ಪುರುಷ ಮತ್ತು ಮಹಿಳೆಯರು ಸಮಾನರು. ಆದರೂ ಮಹಿಳೆ ಶೋಷಣೆ ಮತ್ತು ತುಳಿತಕ್ಕೆ ಒಳಗಾಗುತ್ತಿದ್ದಾಳೆ. ಮೂಢ ನಂಬಿಕೆ, ಧಾರ್ಮಿಕ, ಸಂಪ್ರದಾಯಿಕ ಆಚರಣೆಯಿಂದಾಗಿ ಮಹಿಳೆ ತೊಂದರೆಯನ್ನು ಅನುಭವಿಸುತ್ತಿದ್ದಾಳೆ. ಮಹಿಳೆಯರ ಮೇಲೆ ಕಟ್ಟು ನಿಟ್ಟಿನ ಕ್ರಮಗಳನ್ನು ಹಾಕದೆ ಅವಳನ್ನು ಸಮಾನವಾಗಿ ಗುರುತಿಸಬೇಕಾಗಿದೆ. ಶಿಕ್ಷಣದಿಂದ ಮಹಿಳೆ ವಂಚಿರಾಗಬಾರದು. ಕೇವಲ ಪ್ರಮಾಣ ಪತ್ರಕ್ಕಾಗಿ ಶಿಕ್ಷಣ ಪಡೆಯದೆ ಜೀವನಾನುಭವದ ವಿದ್ಯೆ, ಸಮಾಜ ಮುಖಿಯಾಗಿ ಚಿಂತನೆ ಮಾಡುವ ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ದೇಶವನ್ನು ಬದಲಾಯಿಸಲು ಮಹಿಳೆಯರಿಂದ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಗಮನ ನೀಡಬೇಕು ಸಮಾಜದಲ್ಲಿ ಮಹಿಳೆಯರ ಪರವಾಗಿರುವ ಮನಸ್ಸುಗಳು ಇದ್ದರೆ ಮಾತ್ರ ಮಹಿಳೆ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ.ರೇಶ್ಮಾ ಗಜಾಕೋಶ ಮತ್ತು ರಶ್ಮಿ ಕೊಕಟನೂರ ಮಾತನಾಡಿದರು.ವೇದಿಕೆಯ ಮೇಲೆ ಪ್ರೊ.ಗೀತಾ ಸಜ್ಜನ, ಶೋಭಾ ಪಿಟಗಿ, ಶ್ವೇತಾ ಮಠದ ಇದ್ದರು.ಮಧು ಗುರುವ ಪ್ರಾರ್ಥಿಸಿದರು. ಕಾವೇರಿ ಜಗದಾಳ ಸ್ವಾಗತಿಸಿದರು. ಆರತಿ ಅಡವಿತೋಟ ನಿರೂಪಿಸಿದರು. ಲಕ್ಷ್ಮಿ ಖವಾಸಿ ವಂದಿಸಿದರು.ಮಹಾವಿದ್ಯಾಲಯದ ಉಪನ್ಯಾಸಕಿಯರು ಮತ್ತು ವಿದ್ಯಾರ್ಥಿನಿಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next