Advertisement

ನೀರಿಗಾಗಿ ಮಹಿಳೆಯರ ಪ್ರತಿಭಟನೆ

05:04 AM May 30, 2020 | Team Udayavani |

ಯಳಂದೂರು: ತಾಲೂಕಿನ ಕಂದಹಳ್ಳಿಯಲ್ಲಿ ಒಂದು ತಿಂಗಳಿಂದಲೂ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಎಂದು ಇಲ್ಲಿನ ಮಹಿಳೆಯರು ಖಾಲಿ ಕೊಡಗಳು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು

Advertisement

. ಗ್ರಾಮದ ನಾಯಕರ ಹೊಸ  ಬಡಾವಣೆಗೆ ಓವರ್‌ ಹೆಡ್‌ ಟ್ಯಾಂಕ್‌ ನಿಂದ ಕುಡಿಯುವ ನೀರು ಪೂರೈಸುವ ಪೈಪ್‌ ಒಡೆದು ಹೋಗಿದೆ. ದುರಸ್ತಿಗೆಂದು ಇದಕ್ಕೆ ಹಳ್ಳ ತೆಗೆದು ಹಾಗೆ ಬಿಡಲಾಗಿದೆ. ಆದರೆ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಮಹಿಳೆಯರು  ದೂರಿದರು. 50ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿರುವ ಬಡಾವಣೆಯಲ್ಲಿ ನೀರಿಗೆ ತುಂಬಾ ಸಮಸ್ಯೆಯಾಗಿದೆ.

ಈಚೆಗೆ ಸುರಿದ ಮಳೆಯಿಂ ದ ಪೈಪ್‌ ಸರಿಪಡಿಸಲು ಅಗೆದ ಗುಂಡಿಯಲ್ಲಿ ಇಲ್ಲಿ ನೀರು ಸಂಗ್ರಹವಾಗಿದೆ.  ರಾತ್ರಿ ವೇಳೆ  ಗುಂಡಿಯಲ್ಲಿ ಬಿದ್ದು ಕೆಲವರು ಗಾಯಗೊಂಡಿದ್ದಾರೆ. ದುಗ್ಗಹಟ್ಟಿ ಗ್ರಾಪಂಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ವಹಿಸಿಲ್ಲ. ಈಗಲಾದರೂ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಗ್ರಾಮಸ್ಥರಾದ ಲಕ್ಷ್ಮೀ, ಕಂದಹಳ್ಳಿ ದೊರೆ, ಮಣಿಯಮ್ಮ, ಮಹಾದೇವಮ್ಮ, ಶಾಂತಮ್ಮ, ಶಾರದಮ್ಮ, ಸರೋಜಮ್ಮ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next