Advertisement

ಮಹಿಳಾ ಅಧಿಕಾರಿಗಳನ್ನು ನೇಮಿಸಿ: ಬಿಜೆಪಿ

10:55 AM Mar 03, 2017 | Harsha Rao |

ಲಕ್ನೋ: ಉತ್ತರ ಪ್ರದೇಶದ ಸೂಕ್ಷ್ಮ ಮತಗಟ್ಟೆಗಳಲ್ಲಿ ಬುರ್ಕಾ ಧರಿಸಿ ಬರುವ ಮಹಿಳೆಯರಲ್ಲಿ ಗುರುತಿನ ಚೀಟಿ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ಮಹಿಳಾ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನೇಮಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. 

Advertisement

ಈ ಬಗ್ಗೆ ಉತ್ತರ ಪ್ರದೇಶ ಮುಖ್ಯ ಚುನಾವಣಾ ಆಯುಕ್ತರಿಗೆ ಪಕ್ಷ ಮನವಿ ಸಲ್ಲಿಸಿದೆ. ಆರು ಮತ್ತು ಏಳನೇ ಹಂತದ ಮತದಾನದ ವೇಳೆ ಈ ನಿಯಮ ಜಾರಿಗೆ ತರುವಂತೆ ಮನವಿ ಮಾಡಲಾಗಿದೆ. ತಪ್ಪಾಗಿ ಮತದಾನ ಮಾಡುವುದನ್ನು ತಪ್ಪಿಸಲು ಇಂಥ ಕ್ರಮ ಕೈಗೊಳ್ಳಬೇಕೆಂದು ಅದರಲ್ಲಿ ಒತ್ತಾಯಿಸಲಾಗಿದೆ. ಮತ್ತೂಂದೆಡೆ ಮಾ.4ರಂದು 49 ಕ್ಷೇತ್ರಗಳಲ್ಲಿ ನಡೆಯಲಿರುವ ಆರನೇ ಹಂತದ ಮತದಾನಕ್ಕೆ ಗುರುವಾರ ಪ್ರಚಾರ ಕಾರ್ಯಮುಕ್ತಾಯವಾಗಿದೆ. ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ಲೋಕಸಭಾ ಕ್ಷೇತ್ರ ಆಜಂಗಡವೂ ಅದರಲ್ಲಿ ಸೇರಿದೆ.

ಈ ನಡುವೆ ಉತ್ತರ ಪ್ರದೇಶದ ಮಹಾರಾಜ್‌ ಗಂಜ್‌ನಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ  ಉತ್ತರ ಪ್ರದೇಶ ದ್ವೇಷಮಯ ರಾಜ್ಯವನ್ನಾಗಿಸಲು ಅವಕಾಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅದೇ ರೀತಿಯ ಅಜೆಂಡಾ ಹೊಂದಿದ್ದಾರೆ ಎಂದು ದೂರಿದರು.  

ಕೆಲಸ ಮಾಡದಿರುವುದೇ ಪಾಪ: ಬಲಿಯಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಯಾವುದೇ ಕೆಲಸವನ್ನು ಮಾಡದಿರುವುದೇ ಪ್ರಧಾನಿ ನರೇಂದ್ರ ಮೋದಿಯವರ ಬಲುದೊಡ್ಡ ಪಾಪ ಎಂದು ಲೇವಡಿ ಮಾಡಿದ್ದಾರೆ. ಕೆಟ್ಟ ಕೆಲಸಗಳು ದೊಡ್ಡದಾಗಿ ಸದ್ದು ಮಾಡುತ್ತವೆ ಎಂಬ ಪ್ರಧಾನಿ ಹೇಳಿಕೆ ಈ ಮೂಲಕ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next