ಮುಂಬೈ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (ಎಂಎಸ್‌ಆರ್‌ಟಿಸಿ) ಎಲ್ಲಾ ಬಸ್‌ಗಳಲ್ಲಿ ಮಹಿಳೆಯರಿಗೆ ಟಿಕೆಟ್ ಶುಲ್ಕದಲ್ಲಿ ಶೇ.50 ರಿಯಾಯತಿ ನೀಡುವ ನಿಯಮವನ್ನು ಮಾ.17ರ ಶುಕ್ರವಾರದಿಂದ ಜಾರಿಗೊಳಿಸಲಾಗಿದೆ.
Advertisement
ರಿಯಾಯತಿಯು ಮಹಿಳಾ ಸಮ್ಮಾನ್ ಯೋಜನೆಯ ವಿಸ್ತರಣೆಯ ಭಾಗವಾಗಿದ್ದು, ಸಾರಿಗೆ ನಿಗಮಗಳಿಗೆ ರಿಯಾಯತಿ ಹಣವನ್ನು ಸರ್ಕಾರ ಪಾವತಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 9ರಂದು ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ದೇವೇಂದ್ರ ಫಡ್ನವೀಸ್ ಮಂಡಿಸಿದ 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ, ಮಹಿಳೆಯರಿಗೆ ಶೇ.50 ಟಿಕೆಟ್ ಶುಲ್ಕ ರಿಯಾಯಿತಿ ಘೋಷಿಸಿದ್ದರು.