Advertisement

“ಮಹಿಳೆಯರು ಸಬಲರಾಗಲು ಆಸಕ್ತಿ, ಧೈರ್ಯ, ಕೌಶಲ ಅಗತ್ಯ’

12:30 AM Mar 09, 2019 | Team Udayavani |

ಉಡುಪಿ: ಮಹಿಳೆಯರು ಸಬಲರಾಗಲು ಆಸಕ್ತಿ, ಧೈರ್ಯ, ಅತ್ಯುನ್ನತ ಕೌಶಲ ಅಗತ್ಯ ಎಂದು ಮಣಿಪಾಲ ಸ್ಕೂಲ್‌ ಆಫ್ ಮ್ಯಾನೇಜ್‌ಮೆಂಟ್‌ (ಎಸ್‌ಒಎಂ) ನಿರ್ದೇಶಕ ಡಾ| ರವೀಂದ್ರನಾಥ ನಾಯಕ್‌ ಅಭಿಪ್ರಾಯಪಟ್ಟರು.

Advertisement

“ಪವರ್‌’ (ಪ್ಲ್ರಾಟ್‌ ಫಾರಂ ಆಫ್ ವಿಮೆನ್‌ ಎಂಟರ್‌ ಪ್ರೀನಿಯರ್) ಸಂಸ್ಥೆ , ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಎಸ್‌ಒಎಂ ಸಹಯೋಗದಲ್ಲಿ ಶುಕ್ರವಾರ ಅಜ್ಜರಕಾಡು ಪುರಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ಉದ್ಯಮ ಶೀಲತೆ -2019′ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಉನ್ನತ ವಿದ್ಯಾಭ್ಯಾಸ ಹೊಂದಿ ಪೂರ್ಣಕಾಲಿಕ ನೌಕರರಾಗಿ ದುಡಿಯುವುದಕ್ಕಿಂದ ಸ್ವ ಉದ್ಯೋಗ ಪ್ರಾರಂಭಿಸಿವುದು ಉತ್ತಮ. ಆ ಮೂಲಕ ನೂರಾರು ಮಹಿಳೆಯರಿಗೆ ಉದ್ಯೋಗ ನೀಡಬಹುದು. ಯಾವುದೇ ಒಂದು ಉದ್ಯಮವನ್ನು ಆರಂಭಿಸುವುದಕ್ಕಿಂತ ಮುಂಚಿತವಾಗಿ ತರಬೇತಿ ಪಡೆಯುವುದು ಮುಖ್ಯ ಎಂದು ತಿಳಿಸಿದ್ದಾರೆ.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ವಾಮನ್‌ ನಾಯಕ್‌ ಮಾತನಾಡಿ, ಸರಕಾರ ಸ್ವ ಉದ್ಯೋಗ ಪ್ರಾರಂಭಿಸಲು ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ಹಾಗೂ ಸಂಘ ಸಂಸ್ಥೆಯ ಮೂಲಕ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.ಉದ್ಯಮಿ ಶ್ರುತಿ ಶೆಣೈ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷೆ ಡಾ| ಗಾಯತ್ರಿ ಸ್ವಾಗತಿಸಿ, ಕಾರ್ಯದರ್ಶಿ ಸವಿತಾ ಕಾರ್ಯಕ್ರಮ ನಿರ್ವಹಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next