Advertisement
“ಧಾರ್ಮಿಕ ನಂಬಿಕೆಯಿಂದ ನನ್ನಿಬ್ಬರು ಹೆಣ್ಣು ಮಕ್ಕಳಿಗೆ ಕ್ರಿಕೆಟ್ ಕಲಿಸಲಿಲ್ಲ’ ಎಂದು ಅಫ್ರಿದಿ ಬರೆದುಕೊಂಡಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕರು ಅಫ್ರಿದಿ ಹೆಣ್ಣು ಮಕ್ಕಳ ಹಕ್ಕನ್ನು ಕಸಿದುಕೊಂಡ ದೊಡ್ಡ ಸಂಪ್ರದಾಯವಾದಿ ಎಂದು ಟೀಕಿಸಿದ್ದಾರೆ.
“ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಕ್ರೀಡೆಯನ್ನು ಪರಿಚಯಿಸಲಿಲ್ಲ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಇರುವ ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆ. ನಮ್ಮ ಧರ್ಮದಲ್ಲಿ ಹೆಣ್ಣು ಮಕ್ಕಳು ಕ್ರೀಡೆಗೆ ಬರುವುದು ಧರ್ಮ ವಿರೋಧಿ. ಹೀಗಾಗಿ ನನ್ನಿಬ್ಬರು ಹೆಣ್ಣು ಮಕ್ಕಳಿಗೆ ಕ್ರಿಕೆಟ್ ಅಥವಾ ಯಾವುದೇ ಕ್ರೀಡೆಯನ್ನು ಕಲಿಸಲಿಲ್ಲ. ನನ್ನ ಅಭಿಪ್ರಾಯಕ್ಕೆ ನನ್ನ ಹೆಂಡತಿ ಕೂಡ ಒಪ್ಪಿಗೆ ನೀಡಿದ್ದಳು. ಒಬ್ಬ ಪಾಕಿಸ್ಥಾನದ ಸಂಪ್ರದಾಯವಾದಿ ತಂದೆಯಾಗಿ ಈ ನಿರ್ಧಾರ ತೆಗೆದುಕೊಂಡೆ’ ಎಂದು ಅಫ್ರಿದಿ ಬರೆದಿದ್ದಾರೆ.