Advertisement

ಪ್ರಕರಣ ವಾಪಸ್ ಪಡೆಯಲು ಉಗ್ರಪ್ಪ ಒತ್ತಡ! ಮಹಿಳೆ ಆರೋಪ

04:23 PM Nov 01, 2018 | Team Udayavani |

ಬೆಂಗಳೂರು:ನನ್ನ ಮಗಳ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ವಾಪಸ್ ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಅಧ್ಯಕ್ಷರಾಗಿದ್ದ ವಿಎಸ್ ಉಗ್ರಪ್ಪ ಒತ್ತಡ ಹೇರಿ ತಪ್ಪಿತಸ್ಥರನ್ನು ರಕ್ಷಿಸುತ್ತಿದ್ದಾರೆ ಎಂದು ಮಮತಾ ಸಿಂಗ್ ಎಂಬವರು ಗುರುವಾರ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,2014ರ ಫೆಬ್ರುವರಿಯಿಂದ ನವೆಂಬರ್ 15ರವರೆಗೆ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ನನ್ನ ನಾದಿನಿಯ ಮಗನೇ ದೌರ್ಜನ್ಯ ಎಸಗಿದ ವ್ಯಕ್ತಿಯಾಗಿದ್ದ. ಲಕ್ನೋದಲ್ಲಿ ಬಿಟೆಕ್ ಮಾಡಿ, ಬೆಂಗಳೂರಿಗೆ ಬಂದಿದ್ದರು. ನಮ್ಮ ಮನೆಯಲ್ಲಿ ಇದ್ದಿದ್ದರು. ಈ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಹೇಳಿದರು.

ಆ ವ್ಯಕ್ತಿಗೆ ಕೋರ್ಟ್ ನಿಂದ ಇನ್ನೂ ಜಾಮೀನು ಸಿಕ್ಕಿಲ್ಲ, ಒಂಬತ್ತು ವರ್ಷಗಳಿಂದ ಕೇಸ್ ನಡೆಯುತ್ತಿದೆ. ಆದರೆ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾದ ಉಗ್ರಪ್ಪನವರ ಬಳಿ ಹೋಗಿ ದೂರು ಕೊಟ್ಟರೆ ಅವರು ನಮಗೆ ನ್ಯಾಯ ಕೊಡಿಸಲಿಲ್ಲ. ಬದಲಾಗಿ ಆರೋಪಿಯ ಪರವಾಗಿಯೇ ಮಾತನಾಡಿ, ನಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ದೂರಿದ್ದಾರೆ.

ಪ್ರಕರಣ ವಾಪಸ್ ತೆಗೆದುಕೊಳ್ಳುವಂತೆ ಪದೇ, ಪದೇ ಒತ್ತಡ ಹೇರುತ್ತಿದ್ದಾರೆ. ಇವರಿಂದ ನ್ಯಾಯ ಸಿಗಲು ಸಾಧ್ಯವೇ? ಬಳ್ಳಾರಿ ಜನತೆ ಉಗ್ರಪ್ಪನವರಿಗೆ ಮತಹಾಕಬಾರದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next