Advertisement

Women cestoball ವಿಶ್ವಕಪ್ :ಮಹಿಳಾ ವಿವಿಯ ಶೃತಿ ಉತ್ತಮ ಪ್ರದರ್ಶನ

06:26 PM Jun 09, 2023 | Vishnudas Patil |

ವಿಜಯಪುರ: ಬೆಂಗಳೂರಿನಲ್ಲಿ ನಡೆದ ಮಹಿಳಾ ಸಿಸ್ಟೋಬಾಲ್ ಮೊದಲ ವಿಶ್ವಕಪ್‍ನಲ್ಲಿ ಭಾರತೀಯ ವನಿತೆಯರ ತಂಡ ದ್ವಿತಿಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕನ್ನಡತಿಯ ಪಾಲೂ ಇದೆ. ಭಾರತೀಯ ತಂಡದ ವಿಜಯದಲ್ಲಿ ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೂ ತಂಡದಲ್ಲಿದ್ದದ್ದು ಪ್ರಶಂಸನಾರ್ಹ.

Advertisement

ಈ ಅಂತಿಮ ಹೋರಾಟದಲ್ಲಿ ಅರ್ಜೆಂಟೀನಾ ಗೆಲ್ಲುವ ಮೂಲಕ ಮಹಿಳಾ ವಿಶ್ವಕಪ್ ಮೊದಲ ಕಪ್ ತನ್ನದಾಗಿಸಿಕೊಂಡಿದೆ. ಭಾರತ ರನ್ನರ್ ಪ್ರಶಸ್ತಿ ಪಡೆದರೈ ವಿಶ್ವ ಮಟ್ಟದಲ್ಲಿ ವಿಶೇಷವಾಗಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮೇ ಕೊನೆ ವಾರದಲ್ಲಿ ನಡೆದ ಸಿಸ್ಟೋಬಾಲ್ ಮಹಿಳಾ ವಿಶ್ವಕಪ್‍ನಲ್ಲಿ ಭಾರತ, ಶ್ರೀಲಂಕಾ ಅರ್ಜೆಂಟೀನಾ, ಬಾಂಗ್ಲಾ, ಭೂತಾನ ಮತ್ತು ಪ್ರಾನ್ಸ್ ದೇಶಗಳು ಭಾಗವಹಿಸಿದ್ದವು. ಸದರಿ ಸ್ಪರ್ಧೆಯಲ್ಲಿ ಅಂತಿಮ ಹಂತದಲ್ಲಿ ಅರ್ಜೆಂಟೀನಾ-ಭಾರತದ ವನಿತೆಯರು ಮುಖಾಮುಖಿಯಾಗಿದ್ದರು.

ಭಾರತ ತಂಡ ಕನ್ನಡತಿ ಮತ್ತು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶೃತಿ ಟಿ.ಎಸ್. ಅತ್ಯುತ್ತಮ ಪ್ರದರ್ಶನದೊಂದಿಗೆ ಎರಡನೆಯ ಸ್ಥಾನ ಪಡೆದು, ಮೊದಲ ವಿಶ್ವಕಪ್‍ನಲ್ಲಿ ಇತಿಹಾಸ ಬರೆದಿದ್ದಾರೆ.

ಕ್ರೀಡಾಪಟು-ವಿದ್ಯಾರ್ಥಿನಿ ಶೃತಿ ಟಿ.ಎಸ್. ಸಾಧನೆಗೆ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಪ್ರೊ.ಬಿ.ಎಸ್.ನಾವಿ, ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಸಕ್ಪಾಲ್ ಹೂವಣ್ಣ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next