Advertisement

2005ಕ್ಕೆ ಮುನ್ನ ಜನಿಸಿದ ಹೆಣ್ಣು ಮಕ್ಕಳಿಗೂ ಪಾಲು

12:44 PM Feb 04, 2018 | Team Udayavani |

ಹೊಸದಿಲ್ಲಿ: ಪುರುಷರು ಮತ್ತು ಮಹಿಳೆಯರ ಮಧ್ಯೆ ಸಮಾನತೆ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಆದೇಶ ವೊಂದನ್ನು ಸುಪ್ರೀಂ ಕೋರ್ಟ್‌ ಹೊರಡಿಸಿದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆ 2005 ಮಹಿಳೆ ಯರಿಗೂ ಆಸ್ತಿಯಲ್ಲಿ ಸಮಪಾಲು ಪಡೆ ಯುವ ಹಕ್ಕು ನೀಡಿದ್ದು, ಈ ಕಾಯ್ದೆ ಜಾರಿಗೆ ಬರುವುದಕ್ಕೂ ಮುನ್ನ ಅಂದರೆ 2005ಕ್ಕೂ ಮೊದಲೇ ಜನಿಸಿದ ಮಹಿಳೆಯರಿಗೂ ಇದು ಅನ್ವಯವಾಗುತ್ತದೆ ಎಂದು  ಕೋರ್ಟ್‌ ಹೇಳಿದೆ.

Advertisement

2005ಕ್ಕೂ ಮೊದಲು ಮಹಿಳೆ ಜನಿಸಿದ್ದಳು ಎಂಬ ಕಾರಣಕ್ಕೆ ತವರು ಮನೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸ ಬಾರದು ಎಂದು ಪೀಠ ಹೇಳಿದೆ. ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಆಗ್ರಹಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಕರ್ನಾಟಕದ ಬಾಗಲಕೋಟೆಯ ಇಬ್ಬರು ಸೋದರಿಯರ ಪ್ರಕರಣದಲ್ಲಿ ಪೀಠ ಈ ತೀರ್ಪು ನೀಡಿದೆ.  ಈ ಸಂಬಂಧ ರಾಜ್ಯ ಹೈಕೋರ್ಟ್‌ ಆದೇಶ ತಳ್ಳಿಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next