Advertisement

ಕ್ವಾರ್ಟರ್‌ನಲ್ಲಿ ಮುಗ್ಗರಿಸಿದ ಜೋತ್ಸ್ನಾ 

01:10 AM Mar 15, 2019 | |

ಕೈರೊ (ಈಜಿಪ್ಟ್): ವನಿತಾ “ಬ್ಲ್ಯಾಕ್‌ ಬಾಲ್‌ ಸ್ಕ್ವಾಷ್‌ ಓಪನ್‌’ ಭಾರತದ ತಾರೆ ಜೋತ್ಸ್ನಾ ಚಿನ್ನಪ್ಪ ಆಟ ಕೊನೆಗೊಂಡಿದೆ.

Advertisement

ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಜೋತ್ಸ್ನಾ ವಿಶ್ವದ 5ನೇ ರ್‍ಯಾಂಕಿನ, ನ್ಯೂಜಿಲ್ಯಾಂಡ್‌ ಆಟಗಾರ್ತಿ ಜೋಯೆಲ್‌ ಕಿಂಗ್‌ ವಿರುದ್ಧ ಸೋತು ಕೂಟದಿಂದ ಹೊರನಡೆದಿದ್ದಾರೆ. ಜೋಯೆಲ್‌ ಕಿಂಗ್‌ 64 ನಿಮಿಷದ ಆಟದಲ್ಲಿ 7-11, 12-10, 2-11, 11-5, 11-8 ಗೇಮ್‌ಗಳಿಂದ ಜೋತ್ಸ್ನಾ ಅವರನ್ನು ಮಣಿಸಿದರು. 2-1 ಗೇಮ್‌ಗಳ ಮುನ್ನಡೆಯಲ್ಲಿದ್ದ ಜೋತ್ಸ್ನಾ ಕೊನೆಯ ಎರಡೂ ಗೇಮ್‌ಗಳಲ್ಲೂ ಕಿಂಗ್‌ ಅವರ ಅನುಭವದ ಆಟದ ಮುಂದೆ ಮಂಕಾದರು.

Advertisement

Udayavani is now on Telegram. Click here to join our channel and stay updated with the latest news.

Next