Advertisement
ಪಟ್ಟಣದ ಅಕ್ಕನ ಬಳಗದ ವತಿಯಿಂದ ಏರ್ಪಡಿಸಿದ್ದ ಅಕ್ಕನ ಬಳಗದ 15ನೇ ವಾರ್ಷಿಕೋತ್ಸವ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಅಕ್ಕ ಮಹಾದೇವಿಯರು ಮಹಿಳೆಯರಿಗೆ ಸ್ವತಂತ್ರ ದೊರಕಿಸಿ ಕೊಟ್ಟಿದ್ದರು ಎಂದರು.
Related Articles
Advertisement
ವಾರ್ಷಿಕ ಪಕ್ಷಿ ನೋಟ ಬಿಡುಗಡೆ: ಇದೇ ಸಂದರ್ಭದಲ್ಲಿ ತಾಲೂಕು ವೀರಶೈವ ಮಹಾಸಭಾ ಗೌರವಾದ್ಯಕ್ಷ ಡಾ.ಶಿವರುದ್ರಸ್ವಾಮಿ ಅಕ್ಕನ ಬಳಗದ ವಾರ್ಷಿಕ ಪಕ್ಷನೋಟವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅಕ್ಕನ ಬಳಗ ಮತ್ತಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತರಾಗಬೇಕು ಎಂದರು.
ತಾಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ವಕೀಲ ಶಶಿಬಿಂಬ ಮಾತನಾಡಿ, ಅಕ್ಕನ ಬಳಗ ವೃದ್ಧಾಶ್ರಮವೊಂದನ್ನು ಸ್ಥಾಪಿಸಲು ಮುಂದಾಗಿದ್ದು, ಸ್ಥಾಪನೆಗೆ ಹೆಚ್ಚು ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಸಾಮಾಜಿಕ ಪರಿವರ್ತನೆಗೆ ಹಮ್ಮಿಕೊಳ್ಳುವ ಎಲ್ಲಾ ಕೆಲಸಗಳಿಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಪದಗ್ರಹಣ: ಇದೇ ಸಂದರ್ಭದಲ್ಲಿ 2017-18 ನೇ ಸಾಲಿನ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು. ಬಳಗದ ಗೌರವಾಧ್ಯಕ್ಷೆ ಪರಿಮಳನಾಗಪ್ಪ, ಸಂಸ್ಥಾಪಕ ಅಧ್ಯಕ್ಷೆ ವಿಮಲಾಮೂರ್ತಿ, ಅಧ್ಯಕ್ಷರಾಗಿ ಜಗದಾಂಬ, ಉಪಾಧ್ಯಕ್ಷರಾಗಿ ರೂಪಾ, ಕಾರ್ಯದರ್ಶಿಯಾಗಿ ವಾಣಿ, ಖಜಾಂಚಿ ರಾಜೇಶ್ವರಿ, ಸಹಕಾರ್ಯದರ್ಶಿ ಅಂಬಿಕಾ, ಸಂಚಾಲಕಿ ಅನುಪಮ, ಗೀತಾ, ನಿರ್ದೇಶಕರಾಗಿ ಮಾಲಾ, ಸುಮಾ, ಚಂದನಾ, ಪುಷ್ಪಾ$ಅವರಿಗೆ ಪದಗ್ರಹಣ ಮಾಡಿದರು.
ಅಭಿನಂದನೆ: ಅಕ್ಕನ ಬಳಗದ 2017-18 ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ವೀರಶೈವದ ವಿವಿಧ ಸಂಘಟನೆಯ ಮುಖಂಡರು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಅಖೀಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಪುಟ್ಟಮಲ್ಲಪ್ಪ, ಅಕ್ಕನ ಬಳಗದ ನಿಕಟಪೂರ್ವ ಅಧ್ಯಕ್ಷೆ ಚಂಪಾ ಸೇರಿದಂತೆ ಇತರರು ಇದ್ದರು.