Advertisement
ಆಟೋ ರಿಕ್ಷಾದಲ್ಲಿ ಆಗಮಿಸಿದ ಯುವತಿಯೋರ್ವಳಿಗೆ ಮುಂಬೈ ಮಹಾನಗರ ಪಾಲಿಕೆ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಸೂಚಿಸುತ್ತಾರೆ. ಮಾಸ್ಕ್ ಹಾಕದ ಹೊರತು ಅಲ್ಲಿಂದ ತೆರಳುವ ಅವಕಾಶ ನಿರಾಕರಿಸುತ್ತಾಳೆ. ಇದರಿಂದ ಕೋಪಗೊಂಡ ಯುವತಿ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗುತ್ತಾಳೆ. ಆಕೆ ತಲೆ ಕೂದಲುಗಳನ್ನು ಹಿಡಿದು ಎಳೆದಾಡಿ, ಮನಬಂದಂತೆ ಥಳಿಸಿದ್ದಾಳೆ. ‘ನನ್ನನ್ನು ತಡೆಯಲು, ನನ್ನನ್ನು ಮುಟ್ಟಲು ಎಷ್ಟು ಧೈರ್ಯ ನಿನಗೆ ? ಎಂದು ಕೋಪದಿಂದ ಪ್ರಶ್ನಿಸಿ ಹಲ್ಲೆ ಮಾಡಿದ್ದಾಳೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲ್ಲೆ ನಡೆಸಿದ ಮಹಿಳೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
Advertisement
ಮಾಸ್ಕ್ ಧರಿಸೆಂದ ಪಾಲಿಕೆ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಯುವತಿ
07:38 PM Mar 20, 2021 | Team Udayavani |