ನ್ಯೂಯಾರ್ಕ್:ವೈದ್ಯಕೀಯ ಕ್ಷೇತ್ರದಲ್ಲೇ ತೀರ ಅಪರೂಪ ಎನ್ನುವಂಥ ಘಟನೆಗೆ ನ್ಯೂಯಾರ್ಕ್ ಸಾಕ್ಷಿಯಾಗಿದ್ದು, ಹೃದಯಾಕಾರದ ಗರ್ಭಾಶಯ ಹೊಂದಿದ್ದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಅಮೆರಿಕ ಮೂಲದ ಮಹಿಳೆ ಕರೆನ್ ಟ್ರಾಯ್ 2021ರ ಮಾರ್ಚನಲ್ಲಿ ಗರ್ಭ ಧರಿಸಿದ್ದು, 12ನೇ ವಾರದ ಸ್ಕ್ಯಾನಿಂಗ್‌ನಲ್ಲಿ ಆಕೆಯ ಗರ್ಭಾಶಯದ ಶೈಲಿ ಹೃದಯಾಕಾರದಲ್ಲಿದೆ ಎಂಬುದು ತಿಳಿದುಬಂದಿತ್ತು.
ಆರೋಗ್ಯವಂತ ಮಕ್ಕಳ ಜನನ ಕಷ್ಟಸಾಧ್ಯವೆಂದು ಹೇಳಲಾಗಿತ್ತಾದರೂ,ಉತ್ತಮ ಚಿಕಿತ್ಸೆಯಿಂದ ಅವಳಿ ಮಕ್ಕಳು ಜನಿಸಿದ್ದು,ಮಕ್ಕಳು ಆರೋಗ್ಯ ಪೂರ್ಣವಾಗಿದ್ದಾರೆ ಎಂದು ನ್ಯೂಯಾರ್ಕ್ ಮೂಲದ ಮಾಧ್ಯಮವೊಂದು ವರದಿ ಮಾಡಿದೆ.
ಹೃದಯಾಕಾರದ ಗರ್ಭವಿದ್ದು, ಆರೋಗ್ಯವಂತ ಮಗುವಿಗೆ ಜನ್ಮ ನೀಡುವುದು ಸಾವಿರದಲ್ಲಿ 4 ಮಂದಿಗಷ್ಟೇ ಸಾಧ್ಯವೆಂದು ವೈದ್ಯರು ತಿಳಿಸಿದ್ದಾರೆ.