Advertisement
ಭೂಕುಸಿತದಲ್ಲಿ ತನ್ನ ಕುಟುಂಬದ ಒಂಬತ್ತು ಮಂದಿಯನ್ನು ಕಳೆದುಕೊಂಡಿದ್ದ ಶ್ರುತಿಗೆ ಡಿಸೆಂಬರ್ ನಲ್ಲಿ ಮದುವೆ ನಿಶ್ಚಯವಾಗಿದ್ದು ಇದೀಗ ಶ್ರುತಿಯ ಕೈಹಿಡಿಯಲಿದ್ದ ಹುಡುಗ ಜೆನ್ಸನ್ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಬುಧವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ, ಇದರೊಂದಿಗೆ ತನ್ನ ಕುಟುಂಬ ಸದಸ್ಯರನ್ನು ಕಳೆದುಕೊಂಡ ದುಃಖದಲ್ಲಿದ್ದ ಶ್ರುತಿಗೆ ಭಾವಿ ಪತಿಯ ಸಾವಿನ ಸುದ್ದಿ ಬರಸಿಡಿಲು ಬಡಿದಂತಾಗಿದೆ.
Related Articles
Advertisement
ದುರಂತ ಘಟನೆಗಳ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಈ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ ವಿಪತ್ತುಗಳ ಸಂದರ್ಭದಲ್ಲಿ ಸಂಭವಿಸುವ ನಷ್ಟವನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವೀಗ ಭರವಸೆ ನೀಡುವುದೇನೆಂದರೆ ರಾಜ್ಯದ ಜನತೆ ನಿಮ್ಮೊಂದಿಗಿದೆ. ಶ್ರುತಿ ಮತ್ತು ಜೆನ್ಸನ್ ಅವರ ಕುಟುಂಬಕ್ಕೆ ಸಂತಾಪ. ಇಂದು ಅಂತ್ಯಸಂಸ್ಕಾರ:
ಇಂದು(ಸೆ.12) ಬೆಳಿಗ್ಗೆ ಮರಣೋತ್ತರ ಪರೀಕ್ಷೆಯ ನಂತರ ಜೆನ್ಸನ್ ಅವರ ದೇಹವನ್ನು ಅಂಬಲವಾಯಲ್ನ ಅಂದೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಆಂಡೂರಿನ ನಿತ್ಯಸಾಯಮಾತಾ ಚರ್ಚ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: Mandya case: ಮೆರವಣಿಗೆ ವೇಳೆ ಪಾಕಿಸ್ತಾನ ಮನಸ್ಥಿತಿಯವವರು ಕಿಡಿ ಹಚ್ಚಿದ್ದಾರೆ: ಈಶ್ವರಪ್ಪ