Advertisement
ಕೆಜಿಎಫ್ ಮೂಲದ ದಾಸರಹಳ್ಳಿ ನಿವಾಸಿ ರಘು (33) ಕೊಲೆಯಾದವ. ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರದ ರೂಪಾ (32) ಎಂಬಾಕೆಯನ್ನು ಬಂಧಿಸಲಾಗಿದೆ. ರಘು ಮತ್ತು ರೂಪಾ ನಡುವೆ ಐದು ವರ್ಷಗಳಿಂದ ಅನೈತಿಕ ಸಂಬಂಧವಿದ್ದು, ಆಗಾಗ ರೂಪಾಳ ಮನೆಗೆ ಬರುತ್ತಿದ್ದ ರಘು, ಆಕೆ ಮಗಳ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದ.
Related Articles
Advertisement
ಚಾಕುವಿನಿಂದ ಕೊಲ್ಲಲು ಯತ್ನ: ಎರಡು ದಿನಗಳ ಹಿಂದೆ ರೂಪಾ ಪತಿ ಪ್ರಭು, ಜಾತ್ರೆ ನಿಮಿತ್ತ ತಿಪಟೂರಿಗೆ ತೆರಳಿದ್ದರು. ಮಂಗಳವಾರ ರಾತ್ರಿ ಮನೆಗೆ ಬಂದ ರಘು, ರೂಪಾಳ ಪುತ್ರಿಯ ಕೈ ಹಿಡಿದು ಎಳೆದಾಡಿದ್ದ. ಇದೇ ವಿಚಾರವಾಗಿ ಇಬ್ಬರೂ ಜಗಳವಾಡಿದ್ದರು. ಬುಧವಾರ ರಾತ್ರಿ ಬಂದಾಗಲೂ ರಘು ಅಸಭ್ಯವಾಗಿ ನಡೆದುಕೊಂಡಿದ್ದ.
ಇದರಿಂದ ಕೋಪಗೊಂಡ ರೂಪಾ, ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಮಲಗಿಸಿ, ಕೈ, ಕಾಲು ಕಟ್ಟಿದ್ದಾಳೆ. ತಡರಾತ್ರಿ 1.30ರ ಹೊತ್ತಿಗೆ ತರಕಾರಿ ಕತ್ತರಿಸುವ ಚಾಕುವಿನಿಂದ ತಲೆ, ಕುತ್ತಿಗೆ ಇತರೆ ಭಾಗಗಳಿಗೆ ಇರಿದು ಕೊಲೆಗೈಯಲು ಯತ್ನಿಸಿದ್ದಾಳೆ. ಆದರೆ, ಚಾಕು ಹರಿತವಿಲ್ಲದ ಕಾರಣ ಕೊಲ್ಲಲು ಸಾಧ್ಯವಾಗಿಲ್ಲ.
ಬಳಿಕ ಮನೆಯಲ್ಲಿದ್ದ ಗೆùಂಡರ್ ಕಲ್ಲು ತಂದು ತಲೆ ಮೇಲೆ ಎತ್ತಿ ಹಾಕಿ ಕೂಲೆಗೈದಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರೂಪಾ ಮನೆಯಿಂದ ಜೋರಾಗಿ ಶಬ್ಧ ಬರುತ್ತಿರುವುದನ್ನು ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ರಘು ಮೃತಪಟ್ಟಿದ್ದ.
ಮಕ್ಕಳಿಗೆ ನಿತ್ಯ ನಿದ್ದೆ ಮಾತ್ರೆ: ವಿವಾಹಿತನಾಗಿರುವ ರಘು ಐದು ವರ್ಷಗಳಿಂದ ರೂಪಾ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ. ರೂಪಾಳ ಪತಿ ಪ್ರಭು ಮನೆಯಲ್ಲಿ ಇಲ್ಲದ ವೇಳೆ ರಾತ್ರಿ ಹೊತ್ತು ಮನೆಗೆ ಬರುತ್ತಿದ್ದ ರಘು, ನಿತ್ಯ ನಿದ್ದೆ ಮಾತ್ರೆ ತರುತ್ತಿದ್ದ. ಅದನ್ನು ರೂಪಾ ತನ್ನ ಅಕ್ರಮ ಸಂಬಂಧದ ಬಗ್ಗೆ ತಿಳಿಯಬಾರದು ಎಂದು ಇಬ್ಬರೂ ಮಕ್ಕಳ ಊಟದಲ್ಲಿ ಬೆರೆಸುತ್ತಿದ್ದಳು. ಈ ಆಹಾರ ಸೇವಿಸಿದ ಮಕ್ಕಳು ಗಾಢ ನಿದ್ರೆಗೆ ಜಾರುತ್ತಿದ್ದರು ಎನ್ನಲಾಗಿದೆ.
ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್: ರೂಪಾ ಜತೆ ಐದು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದ ರಘು, ರೂಪಾಗೆ ಗೊತ್ತಾಗದ ಹಾಗೆ ಆಕೆಯ ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದ. ಈ ಫೋಟೋ, ವಿಡಿಯೋಗಳನ್ನು ತೋರಿಸಿ ಆಗಾಗ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ರಘು, ಅಲ್ಪಸ್ವಲ್ಪ ಹಣ ಕೀಳುವ ಜತೆಗೆ, ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಇತ್ತೀಚೆಗೆ ಪುತ್ರಿಯ ಮೇಲೆ ಕಣ್ಣು ಹಾಕಿದ್ದ ರಘು ಅದೇ ಫೋಟೋ, ವಿಡಿಯೋ ತೋರಿಸಿ ಬೆದರಿಸುತ್ತಿದ್ದ. ಜತೆಗೆ ಮಗಳೊಂದಿಗೆ ಆತ ಅಸಭ್ಯವಾಗಿ ವರ್ತಿಸಿದ್ದ. ಆದ್ದರಿಂದ ಆತನನ್ನು ಕೊಂದಿರುವುದಾಗಿ ಆರೋಪಿ ರೂಪಾ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಕ್ರಮ ಸಂಬಂಧಕ್ಕೆ ತಿಲಾಂಜಲಿ: ರಘು ಮತ್ತು ರೂಪಾ ಐದು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಈ ವೇಳೆ ರಘು ರೂಪಾಳ ಅಶ್ಲೀಲ ಫೋಟೋಗಳು ಹಾಗೂ ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದ. ಇದನ್ನು ತೋರಿಸಿ ಆಕೆಗೆ ಆಗಾಗ್ಗ ಬ್ಲ್ಯಾಕ್‌ಮೇಲ್ ಮಾಡಿ ಹಣ ಹಾಗೂ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಅಲ್ಲದೇ ಇತ್ತೀಚೆಗೆ ಪುತ್ರಿಯ ಬಗ್ಗೆ ಕೆಟ್ಟದಾಗಿ ನಡೆದುಕೊಂಡು, ಅಶ್ಲೀಲವಾಗಿ ಮಾತನಾಡಿದ್ದರಿಂದ ಕೊಂದಿದ್ದಾಗಿ ಆರೋಪಿತೆ ಮಹಿಳೆ ರೂಪಾ ಹೇಳಿಕೆಯಲ್ಲಿ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.