Advertisement
ಮೆಹಂದಿ ಎಂಬುದು ಗೋರಂಟಿ ಸಸ್ಯದ ಪುಡಿಮಾಡಿದ ಒಣ ಎಲೆಗಳಿಂದ ಮಾಡಿದ ತಾತ್ಕಾಲಿಕ ಹಚ್ಚೆಯಾಗಿದ್ದು, ಇದನ್ನು ಕೈ ಮತ್ತು ಕಾಲುಗಳ ಮೇಲೆ ಅಲಂಕಾರಿಕ ವಿನ್ಯಾಸಗಳನ್ನು ಮಾಡಲು ಬಳಸಲಾಗುತ್ತದೆ.ಆದರೆ ಈ ಮಹಿಳೆ ಕುಪ್ಪಸ ಹಾಕಬೇಕಾದ ಜಾಗದಲ್ಲಿ ಮೆಹೆಂದಿ ಹಾಕಿಸಿಕೊಂಡು ಗಮನ ಸೆಳೆದಿದ್ದಾಳೆ.
ಬಿಳಿ ಸೀರೆ ಉಟ್ಟ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಟಿಪಿಕಲ್ ಫ್ಯಾಬ್ರಿಕ್ ಬ್ಲೌಸ್ ಬದಲಿಗೆ ಮೆಹಂದಿ ಬ್ಲೌಸ್ ಧರಿಸಿದ್ದಳು. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಮಹಿಳೆಯು ತನ್ನ ಬೆನ್ನಿನ ಭಾಗದಲ್ಲಿ ಸಂಕೀರ್ಣವಾದ ಮೆಹಂದಿ ವಿನ್ಯಾಸವನ್ನು ಹೊಂದಿದ್ದು ಅದು ಅಲಂಕಾರಿಕ ಟಾಪ್ ಧರಿಸಿದಂತೆ ಕಾಣಿಸುತ್ತಿದೆ. ವಿಶೇಷವೆಂದರೆ ಈಕೆ ಯಾವುದೇ ಬಟ್ಟೆಯ ಬ್ಲೌಸ್ ಧರಿಸಿಲ್ಲ…!Related Articles
Advertisement