ಮಾಗಡಿ: ತಾಲೂಕಿನ ಕಲ್ಲುಪಾಳ್ಯದಲ್ಲಿ ಚಿರತೆ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಗಂಗಾಧರ್ ಪತ್ನಿ ಮಹಾಲಕ್ಷ್ಮಮ್ಮ (36) ಮೃತ ದುರ್ದೈವಿ. ಗ್ರಾಮಗಳಲ್ಲಿ ಚಿರತೆ ಹಾವಳಿ ನಿಯಂತ್ರಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬಿಕೆ ಮುಖ್ಯ ರಸ್ತೆ ತಡೆದು ಪ್ರತಿಭಟಿಸಿದರು.
ಮಾಗಡಿ ತಾಲೂಕಿನ ಕಾಳಾರಿ ಕಾವಲ್ ಪಂಚಾಯ್ತಿ ವ್ಯಾಪ್ತಿಯ ಕಲ್ಲುಪಾಳ್ಯ ಗ್ರಾಮದ ಸಮೀಪ ದನಗಳನ್ನು ಮೇಯಿಸಲು ಸುಮಾರು ಶನಿವಾರ ಬೆಳಗ್ಗೆ 10 ಗಂಟೆ ಸಮಯದಲ್ಲಿ ಹೊಲಕ್ಕೆ ತೆರಳಿದ್ದಾಗ ದನಗಳನ್ನು ಮೇಯಿಸು ತ್ತಿದ್ದಾಗ ಹಾಡ ಹಗಲೇ ಮಹಾಲಕ್ಷ್ಮಮ್ಮ ಮೇಲೆ ಚಿರತೆ ದಾಳಿ ಮಾಡಿ ಬಲಿ ಪಡೆದಿದ್ದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗ್ರಾಮಸ್ಥರ ಪ್ರತಿಭಟನೆ: ಚಿರತೆ ದಾಳಿಗೆ ಮಹಾ ಲಕ್ಷ್ಮಮ್ಮ ಬಲಿಯಾಗಿದ್ದಾಳೆ.
ಇದನ್ನೂ ಓದಿ;- ಗೋವಾ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕನ್ನಡಿಗರು
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ರೊಚ್ಚಿಗೆದ್ದ ಗ್ರಾಮಸ್ಥರು ಬಿ.ಕೆ ಮುಖ್ಯ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಕೂಲಿ ಮಾಡಿ ಮಕ್ಕಳನ್ನು ಓದಿಸುತ್ತಿದ್ದರು. ಈಗ ಅವರ ಕುಟುಂಬ ನಿರ್ವಹಣೆ ಹೇಗೆ? ಇನ್ನೆಷ್ಟು ಮಂದಿ ರೈತರ ಬಲಿಯಾಗಬೇಕು? ಚಿರತೆ ಸೆರೆ ಹಿಡಿದು ಆತಂಕ ದೂರಮಾಡಿ. ಮೃತ ಮಹಿಳೆಗೆ ಸೂಕ್ತ ಪರಿಹಾರ ವಿತರಿಸುವಂತೆ ಗ್ರಾಮದ ಮುಖಂಡರು ಒತ್ತಾಯಿಸಿದರು.
ಪರಿಹಾರ: ಚಿರತೆ ದಾಳಿಗೆ ಬಲಿಯಾದ ಮಹಾ ಲಕ್ಷ್ಮಮ್ಮ ಅವರ ಕುಟುಂಬಕ್ಕೆ 7.50 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಅವರ ಮಕ್ಕಳ ವಿದ್ಯಾ ಭ್ಯಾಸಕ್ಕೆ ಪ್ರತಿ ತಿಂಗಳು ಎರಡುವರೆ ಸಾವಿರ ರೂ. ನೀಡಲಾಗುವುದು. ಅಗತ್ಯವಿದ್ದರೆ ತಾತ್ಕಾಲಿಕ ವಾಗಿ ಉದ್ಯೋಗ ಕೊಡಲಾಗುವುದು ಎಂದು ಅರಣ್ಯಾಧಿಕಾರಿ ದೇವರಾಜು ತಿಳಿಸಿದ್ದಾರೆ.
ಶೀಘ್ರದಲ್ಲಿಯೇ ಪರಿಹಾರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರೈತ ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ. ಧನಂಜಯ, ಸಿ. ಜಯರಾಮ್, ಪ್ರಾಂತ ರೈತ ಸಂಘದ ಸಂಚಾಲಕಿ ವನಜಾ, ಶಿವರಾಮಯ್ಯ, ರಂಗನಾಥ್, ರಮೇಶ್, ಗಂಗಮ್ಮ, ಹನುಮೇ ಗೌಡ, ರಾಜಣ್ಣ, ಸೀಗೇ ಕುಪ್ಪೆ ಶಿವಣ್ಣ, ಮೃತಳ ಪತಿ ಗಂಗಾಧರ್, ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.