Advertisement

ಮಗುವನ್ನು ಬೆನ್ನಲ್ಲಿ ಹೊತ್ತೊಯ್ಯುತ್ತಿದ್ದ ತಾಯಿಯ ಬಂಧನ ; ಇಲ್ಲಿದೆ ಕಾರಣ!

10:22 AM Jan 11, 2020 | Team Udayavani |

ಆಫ್ರಿಕಾದ ದೇಶ ಉಗಾಂಡದಲ್ಲಿ ಬೆನ್ನ ಮೇಲೆ ಮಗುವನ್ನು ಹೊತ್ತುಕೊಂಡಿದ್ದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಶ್ಚರ್ಯವಾಯಿತೇ? ಆದರೆ ಮಹಿಳೆ ತನ್ನ ಬೆನ್ನ ಮೇಲೆ ಹೊತ್ತುಕೊಂಡಿದ್ದಿದ್ದು ಜೀವಂತ ಮಗುವನ್ನಲ್ಲ ಬದಲಾಗಿ ಮಗುವಿನ ರೂಪದಲ್ಲಿದ್ದ ಗೊಂಬೆಯನ್ನು ಮತ್ತು ಆ ಗೊಂಬೆಯಲ್ಲಿ ನಿಷೇಧಿತ ಕಾಸ್ಮೆಟಿಕ್ಸ್ ಅನ್ನು ಸಾಗಿಸಲಾಗುತ್ತಿತ್ತು.

Advertisement

ತಮಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಾಂಗೋ ಗಣರಾಜ್ಯದ ಗಡಿ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್ಸೊಂದನ್ನು ನಿಲ್ಲಿಸಿ ಪೊಲೀಸರು ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬೆನ್ನಲ್ಲಿದ್ದ ಮಗುವಿನ ರೂಪದ ಗೊಂಬೆಯನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಈ ನಿಷೇಧಿತ ಕಾಸ್ಮೆಟಿಕ್ಸ್ ಸಾಗಿಸುತ್ತಿದ್ದ ವಿಷಯ ಬಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಇಯಾನ್ ರುಮಾನ್ಯಿಕ ಅವರು ಸ್ಥಳೀಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಚರ್ಮಕ್ಕೆ ಹೊಳಪನ್ನು ನೀಡುವ ಸೌಂದರ್ಯವರ್ಧಕಗಳನ್ನು ಉಗಾಂಡಕ್ಕೆ ಭಾರೀ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಈ ರೀತಿಯ ಸೌಂದರ್ಯವರ್ಧಕಗಳಲ್ಲಿ ಪಾದರಸ ಹಾಗೂ ಹೈಡ್ರೋಕ್ವಿನೈನ್ ಎಂಬ ವಿಷಕಾರಿ ಅಂಶಗಳಿರುವುದರಿಂದ ಉಗಾಂಡ ಆಡಳಿತವು ಈ ಸೌಂದರ್ಯವರ್ಧಕಗಳ ಮಾರಾಟಕ್ಕೆ ನಿಷೇಧವನ್ನು ಹೇರಿದೆ ಎಂದು ಬಿಬಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next