ಶ್ವಾನ ಪ್ರೇಮಿಗಳಿಗೆ ಅತಿಯಾಗಿ ಕಾಡುವ ಬೇಸರವೆಂದರೆ, ಅದು ತಮ್ಮ ಶ್ವಾನಗಳನ್ನು ಬಿಟ್ಟು ಪ್ರವಾಸ ಕೈಗೊಳ್ಳುವುದು. ಅಂಥ ಬೇಸರಕ್ಕೆ ಭಾರತೀಯ ರೈಲ್ವೆ ಬ್ರೇಕ್ ಹಾಕಿದ ಬಳಿಕ, ಮಹಿಳೆಯೊಬ್ಬರು ತಮ್ಮ ಪ್ರೀತಿಯ ಶ್ವಾನದೊಂದಿಗೆ ರೈಲಿನಲ್ಲಿ ಸುಖಕರ ಪ್ರಯಾಣ ಕೈಗೊಂಡಿದ್ದು, ಆ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಆ ವಿಡಿಯೋವನ್ನು ಶೇರ್ ಮಾಡಿ, ರೈಲ್ವೆ 24*7 ನಿಮ್ಮ ಸೇವೆಯಲ್ಲಿ ಎನ್ನುವ ಕ್ಯಾಪ್ಶನ್ ನೀಡಿದ್ದರು.
ವಿಡಿಯೋ 27 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಸಾಕು ಪ್ರಾಣಿಗಳ ಜತೆಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟ ರೈಲ್ವೆಗೆ ನೆಟ್ಟಿಗರು ಧನ್ಯವಾದ ಅರ್ಪಿಸಿದ್ದಾರೆ.
ಹಲವರು ತಮ್ಮ ಶ್ವಾನಗಳ ಜತೆಗೆ ಪ್ರಯಾಣಿಸಿದ ಅನುಭವವನ್ನೂ ಕಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ.