Advertisement

ಮನೆಗೆ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ ಪತಿಯ ಮುಖದ ಮೇಲೆ ಆ್ಯಸಿಡ್ ಎರಚಿದ ಪತ್ನಿ!

11:53 AM Jan 30, 2023 | Team Udayavani |

ಲಕ್ನೋ: ತಡವಾಗಿ ಮನೆಗೆ ಬಂದ ಕಾರಣಕ್ಕಾಗಿ ಪ್ರಶ್ನೆ ಮಾಡಿದ ಪತಿ ಮೇಲೆ ಪತ್ನಿಯೇ  ಆ್ಯಸಿಡ್‌ ಎಸೆದ ಘಟನೆ ಉತ್ತರಪ್ರದೇಶದ ಕಾನ್ಪುರದ ಕೂಪರ್‌ಗಂಜ್ ಪ್ರದೇಶದಲ್ಲಿ ಶನಿವಾರ ರಾತ್ರಿ (ಜ.28 ರಂದು) ನಡೆದಿದೆ.

Advertisement

ಡಬ್ಬು ಎನ್ನುವ ವ್ಯಕ್ತಿ ತನ್ನ ಪತ್ನಿ ರಾತ್ರಿ ಮನೆಗೆ ತಡವಾಗಿ ಬಂದ ಕಾರಣಕ್ಕೆ ಯಾಕೆ ಮನೆಗೆ ಬರಲು ತಡವಾಯಿತು ಎಂದು ಕೇಳಿದ್ದಾನೆ. ಈ ಮಾತಿಗೆ ತುಸು ಹೆಚ್ಚೇ ಸಿಟ್ಟಾದ ಪತ್ನಿ ಪೂನಂ ಪತಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಪತ್ನಿ ಆಕ್ರೋಶಗೊಂಡು ಬಾತ್‌ ರೂಂನಲ್ಲಿದ್ದ ಆ್ಯಸಿಡ್‌ ಬಾಟಲಿ ತೆಗೆದುಕೊಂಡು ಮುಖದ ಮೇಲೆ ಎಸೆದಿದ್ದಾರೆ.

ಸದ್ಯ ಪತಿ ಡಬ್ಬು ಆಸ್ಪತ್ರೆಗೆ ದಾಖಲಾಗಿದ್ದು, ಪತ್ನಿ ವಿರುದ್ಧ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಅಧಿಕಾರಿಯ ಆಹಾರ ಕದ್ದು ತಿಂದ ಆರೋಪ: ಆರೋಪಿಯಾದ ಪೊಲೀಸ್‌ ಡಾಗ್‌ ಫೋಟೋ ವೈರಲ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next