Advertisement

ಲೈಂಗಿಕ ಕಿರುಕುಳಕ್ಕೆ ವಿರೋಧ : ಚಲಿಸುತ್ತಿದ್ದ ರೈಲಿನಿಂದ ಯುವತಿಯನ್ನು ಹೊರ ತಳ್ಳಿದ ಪಾಪಿ

05:53 PM Apr 30, 2022 | Team Udayavani |

ಛತ್ತಿಸ್ ಪುರ / ಜಬಲ್ಪುರ : ಚಲಿಸುತ್ತಿದ್ದ ರೈಲಿನಲ್ಲಿ ಯುವತಿಯೊಂದಿಗೆ ದುರ್ವರ್ತನೆ ತೋರಿ ಆಕೆಯನ್ನು ರೈಲಿನಿಂದ ಹೊರ ದೂಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Advertisement

ಉತ್ತರ ಪ್ರದೇಶದ ಬಂದಾ ನಿವಾಸಿಯಾಗಿರುವ ಯುವತಿ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಬಾಗೇಶ್ವರ್ ಧಾಮ್ ದೇವಸ್ಥಾನಕ್ಕೆ ಭೇಟಿ ನೀಡಿ ಏಪ್ರಿಲ್ 27 ರಂದು ವಾಪಸ್ಸಾಗುತ್ತಿರುವ ವೇಳೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಏಪ್ರಿಲ್ 27 ರಂದು ರಾತ್ರಿ ಖಜುರಾಹೊ (ಮಧ್ಯಪ್ರದೇಶ) ಮತ್ತು ಮಹೋಬಾ (ಉತ್ತರ ಪ್ರದೇಶ) ನಿಲ್ದಾಣಗಳ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ಯುವತಿ ಪ್ರಯಾಣಿಸುತ್ತಿದ್ದು ಈ ವೇಳೆ ಅದೇ ಬೋಗಿಯಲ್ಲಿದ್ದ ವ್ಯಕ್ತಿಯೊಬ್ಬ ಯುವತಿಗೆ ಕಿರುಕುಳ ನೀಡಲು ಮುಂದಾಗಿದ್ದಾನೆ, ಆದರೆ ಅದಕ್ಕೆ ಅಡ್ಡಿ ಪಡಿಸಿದ ಯುವತಿ ವ್ಯಕ್ತಿಯ ಕೆನ್ನೆಗೆ ಹೊಡಿದಿದ್ದಾಳೆ ಇದರಿಂದ ಕೋಪಗೊಂಡ ವ್ಯಕ್ತಿ ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ದೂಡಿದ್ದಾನೆ. ಘಟನೆಯಿಂದ ಯುವತಿ ಗಂಭೀರ ಗಾಯಗೊಂಡಿದ್ದಾಳೆ

ಗಂಭೀರ ಗಾಯಗೊಂಡ ಯುವತಿಯನ್ನು ಛತ್ತರ್ ಪುರ್ ಜಿಲ್ಲೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಕಿರುಕುಳ ನೀಡಿದ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next