Advertisement

ಮಹಿಳೆ ಕೈಯಲ್ಲಿ ವಿಶ್ವದ ಅತ್ಯಂತ ವಿಷಕಾರಿ ಜೀವಿ. ನಡೆದಿದ್ದೇನು?

08:14 PM Mar 25, 2021 | Team Udayavani |

ಇಂಡೋನೇಷ್ಯಾ: ಪ್ರವಾಸಿ ಮಹಿಳೆಯೊಬ್ಬಳು ತನಗರಿವಿಲ್ಲದೆ ವಿಶ್ವದ ಅತೀ ವಿಷಕಾರಿ ಜೀವಿಗಳಲ್ಲಿ ಒಂದನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದು ಅದೃಷ್ಟ ವಶಾತ್ ಅಪಾಯದಿಂದ ಪಾರಾಗಿರುವ ಘಟನೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ನಡೆದಿದೆ.

Advertisement

ಈ ವಿಷಕಾರಿ ಜೀವಿಯನ್ನು ನೀಲಿ ಉಂಗುರ ( ಬ್ಲೂ ರಿಂಗ್) ಎಂದು ಗುರುತಿಸಲಾಗಿದ್ದು, ಇದು ಸಾಮಾನ್ಯವಾಗಿ ಎಲ್ಲ ಕಡೆ ಗೋಚರವಾಗುವುದಿಲ್ಲ ಎಂದು ತಿಳಿದುಬಂದಿದೆ. ಈ ಕುರಿತಾದ ವಿಡಿಯೋ ಒಂದನ್ನು @Kaylinmarie21  ಎಂಬ ಟಿಕ್‌ಟಾಕ್ ಬಳಕೆದಾರರು ಹಂಚಿಕೊಂಡಿದ್ದಾರೆ.  ಈ ವಿಡಿಯೋದಲ್ಲಿ ಈ ಸಣ್ಣ ಪ್ರಾಣಿಯ ಕುರಿತಾಗಿ ನಾನು ಯಾವುದೇ ಮಾಹಿತಿಯನ್ನು ಹೊಂದಿರಲಿಲ್ಲ ಎಂದು ಮಹಿಳೆ ವಿವರಿಸಿದ್ದಾಳೆ.

ಕಂದು ದೇಹ ಮತ್ತು ಡಾರ್ಕ್ ಸರ್ಕಲ್‌ಗಳನ್ನು ಹೊಂದಿರುವ ಅಕ್ಟೋಪಸ್ ಅನ್ನು ಮಹಿಳೆ ತನ್ನ ಅಂಗೈ ಮೇಲೆ ಇರಿಸಲಾಗಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾದಿದ್ದು, ಪ್ರಾಣಿಗಳ ಪೋಟೋ ತಗೆಯಲು ಬಯಸಿದ್ದ ಈಕೆ, ಈ ಅಕ್ಟೋಪಸ್‌ ಒಂದನ್ನು  ತನ್ನ ಅಂಗೈ ಮೇಲೆ ಇಟ್ಟುಕೊಂಡು ಫೋಟೋಗಳನ್ನು ತೆಗೆದುಕೊಂಡಿದ್ದಾಳೆ. ಆದರೆ, ಈ ಘಟನೆಯ ನಂತರ ಈ ಪ್ರಾಣಿಯ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಈ ಕುರಿತಾಗಿ ಆಕೆ ಗೂಗಲ್‌ ಸರ್ಚ್ ಮಾಡಿದಾಗ ಸತ್ಯ ಬೆಳಕಿಗೆ ಬಂದಿದೆ. ಆ ಪ್ರಾಣಿ 26 ವಯಸ್ಸಿನ ಮನುಷ್ಯರನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಕೊಲ್ಲುವಷ್ಟು ವಿಷವನ್ನು ಹೊಂದಿದೆ ಎಂಬುವುದು ಆಕೆಯ ಅರಿವಿಗೆ ಬಂದಿದೆ.

ಈ ಮಾಹಿತಿ ತಿಳಿದ ನಂತರ ಭಯಭೀತಳಾಗಿ ತನ್ನ ತಂದೆಗೆ ಕರೆ ಮಾಡಿ ಮಾತನಾಡಿದೆ ಎಂದೂ ಆಕೆ ತನ್ನ ವಿಡಿಯೋದಲ್ಲಿ ತಿಳಿಸಿದ್ದಾಳೆ. ಅದೃಷ್ಟವಶಾತ್, ಆ ವಿಷಕಾರಿ ಪ್ರಾಣಿಯಿಂದ ಆಕೆಗೆ ಯಾವುದೇ ಹಾನಿಯಾಗಿರಲಿಲ್ಲ ಮತ್ತು ಮಹಿಳೆ ಸುರಕ್ಷಿತವಾಗಿದ್ದಾಳೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಕುಂಭಮೇಳಕ್ಕೆ ಕೋವಿಡ್ ಪರೀಕ್ಷೆ ಕಡ್ಡಾಯ; ಉತ್ತರಾಖಂಡ ಹೈಕೋರ್ಟ್

Advertisement

ಈ ಪ್ರಾಣಿಯ ವಿಷವು ಸೈನೈಡ್‌ಗಿಂತ 1,000 ಪಟ್ಟು ಹೆಚ್ಚು ವಿಷಕಾರಿಯಾಗಿದೆ  ಎಂದು ಓಷನ್ ಕನ್ಸರ್ವೆನ್ಸಿ ವರದಿ ಮಾಡಿದ್ದು, ವಿಶೇಷವೆಂದರೆ ಒಂದು ವೇಳೆ ಇದು ಕಚ್ಚಿದರೆ ಕಚ್ಚಿಸಿಕೊಂಡವರಿಗೆ  ಇದರ ವಿಷ ತಮ್ಮ ದೇಹಕ್ಕೆ ಸೇರಿಕೊಂಡಿದೆ ಎಂಬುದು ಬಹಳ ತಡವಾಗಿ ಅರಿವಿಗೆ ಬರುತ್ತದೆ. ಅಲ್ಲದೆ, ಈವರೆಗೆ ಬ್ಲೂ ರಿಂಗ್‌ ಅಕ್ಟೋಪಸ್ ಕಚ್ಚಿದರೆ ಯಾವುದೇ ಆ್ಯಂಟಿವೆನೋಮ್ ಲಭ್ಯವಿಲ್ಲ ಮತ್ತು ಮಾರಣಾಂತಿಕ ಪ್ರಾಣಿಯಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಉಳಿಸುವ ಏಕೈಕ ಮಾರ್ಗವೆಂದರೆ ತಕ್ಷಣವೇ  ಕೃತಕ ಉಸಿರಾಟವನ್ನು ನೀಡುವುದು ಎಂದು ಹೇಳಲಾಗಿದೆ.

ಈ ಜೀವಿಯಿಂದ ಕಚ್ಚಿಸಿಕೊಂಡವರಲ್ಲಿ ವಾಕರಿಕೆ, ದೃಷ್ಟಿ ನಷ್ಟ ಅಥವಾ ಕುರುಡುತನ ಮುಂತಾದ ಲಕ್ಷಣಗಳು ಕಂಡುಬರುತ್ತದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next