Advertisement

ದೇವಸ್ಥಾನದಲ್ಲಿ ಮಹಿಳೆ ವಾಸ್ತವ್ಯ

06:04 AM May 21, 2020 | Suhan S |

ಆಲ್ದೂರು: ಪಟ್ಟಣದಲ್ಲಿ ಕಳೆದ 2 ವಾರಗಳಿಂದ ಮಹಿಳೆಯೊಬ್ಬರು ಪಟ್ಟಣದ ದೇವಸ್ಥಾನವೊಂದರಲ್ಲಿ ವಾಸ್ತವ್ಯ ಹೂಡಿದ್ದು ಜನರಲ್ಲಿ ಕುತೂಹಲದ ಜೊತೆಗೆ ಆತಂಕ ಹುಟ್ಟಿಸಿದೆ.

Advertisement

ಕಳೆದ 2 ವಾರಗಳಿಂದ ಮಹಿಳೆ ಏಕಾಂಗಿಯಾಗಿ ಪಟ್ಟಣದ ಅಂಬೇಡ್ಕರ್‌ ವೃತ್ತಕ್ಕೆ ಸಮೀಪವಿರುವ ನಿರ್ಮಾಣ ಹಂತದಲ್ಲಿರುವ ದೇವಸ್ಥಾನದ ಜಗುಲಿಯ ಮೇಲೆ ಬಿಡಾರ ಹೂಡಿದ್ದು ಈ ಮಹಿಳೆಯ ಬಗ್ಗೆ ಯಾರೊಬ್ಬರಿಗೂಮಾಹಿತಿಯಿಲ್ಲ. ಕೋವಿಡ್ ಮಹಾಮಾರಿ ಜಿಲ್ಲೆಯನ್ನು ತಲ್ಲಣಗೊಳಿಸಿದ್ದು ಇಂತಹ ಸಂದರ್ಭದಲ್ಲಿ ಒಂಟಿ ಮಹಿಳೆ ಏಕಾಂಗಿಯಾಗಿ ದೇವಸ್ಥಾನದ ಜಗುಲಿಯ ಮೇಲೆ ವಾಸ್ತವ್ಯ ಹೂಡಿರುವುದು ಆತಂಕದ ಜೊತೆಗೆ ಅನುಮಾ ಮೂಡಿಸಿದೆ. ದೇವಸ್ಥಾನದ ಮುಂಬಾಗದಲ್ಲಿರುವ ಅಂಗಡಿ ವ್ಯಾಪಾರಿಗಳು ಈ ವಿಚಾರವನ್ನು ಆಲ್ದೂರು ಠಾಣೆಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯ ಅಂಗಡಿಗಳ ವ್ಯಾಪಾರಿಗಳು ದೂರಿದ್ದಾರೆ.

ಮಹಿಳೆಯನ್ನು ವಿಚಾರಿಸಿದರೆ ನಾನು 3 ತಿಂಗಳಿನಿಂದ ಇಲ್ಲೇ ಇದ್ದೇನೆ . ಬಳ್ಳಾರಿಯಿಂದ ಬಂದಿದ್ದೇನೆ. ನಾನು ಇಲ್ಲೆ ಇರುತ್ತೇನೆ. ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ಎದುರುತ್ತರ ನೀಡುತ್ತಿದ್ದು ಸಂಬಂಧಿಸಿದವರಿಗೆ ದೂರು ನೀಡುತ್ತೇವೆ ಎಂದು ಅಂಗಡಿ ವ್ಯಾಪಾರಿಗಳು ಅಲ್ಲಿಂದ ಹಿಂದಿರುಗಿದ್ದಾರೆ. ಮಹಿಳೆ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥೆಯಂತೆಯೂ ಕಾಣುತ್ತಿಲ್ಲ. ಭಿಕ್ಷುಕಿಯಂತೆಯೂ ಕಾಣುತ್ತಿಲ್ಲ. ವೃದ್ಧೆಯೂ ಅಲ್ಲ. ಆದರೂ ಒಂಟಿಯಾಗಿ ಇಲ್ಲಿರಲು ಕಾರಣವೇನು ಎಂಬುದೇ ಕುತೂಹಲ ಮೂಡಿಸಿದೆ.  ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯನ್ನು ವಿಚಾರಣೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next