ಚಿಕ್ಕಮಗಳೂರು: ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಮಹಿಳೆಯೋರ್ವರು ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲ್ಲೂಕಿನ ಬಾಳೆಹೊಳೆ ಗ್ರಾಮದ ಕಗ್ಗನಹಳ್ಳ ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪಡೀಲ್ ನಿವಾಸಿ ಜಾನಕಿ (55 ವ) ಎಂದು ಗುರುತಿಸಲಾಗಿದೆ.
ಜು.11ರಂದು ಸಂಜೆ 6ಗಂಟೆಯ ಸುಮಾರಿಗೆ ನಡೆದುಕೊಂಡು ಹೋಗುವಾಗ ಆಯತಪ್ಪಿ ಭದ್ರಾ ನದಿಗೆ ಬಿದ್ದು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಷಯುಕ್ತ ಆಹಾರ ಸೇವಿಸಿ ಒಂದೇ ಕುಟುಂಬದ ಮೂವರು ಸಾವು, ಇಬ್ಬರು ಅಸ್ವಸ್ಥ
ಕುಟುಂಬಸ್ಥರು ಮರುದಿನ 12 ಗಂಟೆವರೆಗೆ ಹುಡುಕಾಟ ನಡೆಸಿ ಮೃತದೇಹ ಸಿಗದೇ ಹೋದ ಕಾರಣ ಸ್ಥಳೀಯ ಮುಳುಗು ತಜ್ಞ ಭಾಸ್ಕರ್ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸದಸ್ಯರಿಗೆ ತಿಳಿಸಿ ಸತತ 4 ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಮೃತ ದೇಹವನ್ನು ಹೊರತೆಗೆಯಲು ಯಶಸ್ವಿಯಾಗಿದ್ದಾರೆ.
ಈ ಸಂಬಂದ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.