ಅರಸೀಕೆರೆ: ಪುರುಷರಿಗೆ ಸಮಾನವಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅಧಿಪತ್ಯ ಸಾ ಧಿಸುವ ಮೂಲಕ ಮುನ್ನುಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಿಕ್ಷಕಿ ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪದ್ಮಾಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ಮಾಡಾಳು ಗ್ರಾಮದ ನಿರಂಜನ ಪೀಠದ ಆವರಣದಲ್ಲಿ ಆಯೋಜಿಸಿದ್ದ 35ನೇ ಮಾಸಿಕ ಶಿವಾನುಭವ ಸಮಾವೇಶ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಹಿಂದಿನ ಕಾಲದಂತೆ ಮಹಿಳೆಯರು ನಾಲ್ಕು ಗೋಡೆಗಳ ನಡುವೆ ನಮ್ಮ ಬದುಕು ಎನ್ನುವುದನ್ನು ಬದಿಗಿಟ್ಟು, ಆಧುನಿಕತೆ ಸಮಾಜದ ನಡುವೆ ಮಹಿಳೆಯರು ಸಾಮಾಜಿಕ, ಶೆ„ಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾಳೆ ಎಂದು ಹೇಳಿದರು.
ಹೆಣ್ಣಿಗೆ ಪೂಜನೀಯ ಸ್ಥಾನ: ಸನಾತನ ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ ಮಹಾಭಾರತ ಕಾಲದಿಂದಲೂ ಹೆಣ್ಣಿಗೆ ಪೂಜನೀಯ ಸ್ಥಾನವಿದೆ.ಆದರೆ ಸಮಾಜದಲ್ಲಿ ಸಮಾನತೆ ಸಾಧಿಸದ ಹೊರತು ದೇಶದ ಸಮಗ್ರ ಪ್ರಗತಿ ಅಸಾಧ್ಯವಾಗುತ್ತದೆ ಆದ್ದರಿಂದ ಮಹಿಳೆಯರು ಯಾವುದಕ್ಕೂ ಧೃತಿಗೆಡದೇ ಆತ್ಮ ವಿಶ್ವಾಸದಿಂದ ಮುಂದೆ ಸಾಗಿದಾಗ ಮಾತ್ರ ಪರಿಪೂರ್ಣ ಮಹಿಳೆಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಷ್ಕೃತ ಶಿಕ್ಷಕಿ ಬಿ.ಕಾಮೇಶ್ವರಿ ಭಟ್ ಮಾತನಾಡಿ, ಮಹಿಳಾ ದಿನಾಚರಣೆ ಮಾ.8ಕ್ಕೆ ಮಾತ್ರ ಸೀಮಿತವಾಗ ಬಾರದು. ಬದಲಾಗಿ ಪ್ರತಿದಿನ ನಡೆಯುವಂತಾಗಬೇಕು. ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅವರ ಮಾದರಿಯಲ್ಲಿ ಪರಿಸರ ಸಂರಕ್ಷಣೆಗೆ ಶ್ರಮಿಸಬೇಕು ಎಂದರು. ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಜಯಶ್ರೀ ಮಾತನಾಡಿ, ದೌರ್ಜನ್ಯದ ವಿರುದ್ಧ ಮಹಿಳೆಯರು ದನಿ ಎತ್ತಬೇಕು ಎಂದರು.
ಮಹಿಳೆ ಪುರುಷರು ಸಮಾನರು: ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರಂಜನಪೀಠದ ರುದ್ರಮುನಿ ಸ್ವಾಮೀಜಿ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರು. ಸಮಾನತೆಯಿಂದ ನಡೆದರೆ ಮಾತ್ರ ಉತ್ತಮ ಮತ್ತುಆರೋಗ್ಯಕರ ಸಮಾಜವನ್ನುನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಒಂದು ಸಮಾಜ ಸಂಸಾರ ಉತ್ತಮ ಸ್ಥಿತಿ ತಲುಪಬೇಕಾದರೆ ಹೆಣ್ಣು ಆಧಾರಸ್ತಂಭವಾಗಿ ನಿಲ್ಲುತ್ತಾಳೆ.ಆದ್ದರಿಂದ ಹೆಣ್ಣಿಗೆ ಪೂಜ್ಯ ಸ್ಥಾನವನ್ನು ನೀಡಲಾಗಿದೆ ಎಂದು ಹೇಳಿದರು.
ಮುಕ್ಕಣ್ಣೇಶ್ವರಿ ಕಲಾ ತಂಡದವರು ಹಾಗೂ ನಿರಂಜನ ಪೀಠದ ಬಸವೇಶ್ವರ ಯುವ ಕಲಾ ಮಂಡಳಿ ಮಹಿಳೆಯರಿಂದ ವಚನ ಗಾಯನ ನಡೆಯಿತು. ರಾಂಪುರ ಮುಕ್ಕಣ್ಣೇಶ್ವರಿ ಎನ್.ಜಿ.ಒ ಸಂಸ್ಥೆಯ ಮುಖ್ಯಸ್ಥೆ ಶೋಭಾರಾಣಿ, ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ, ಗ್ರಾಮದ ಮುಖಂಡರಾದ ಎಂ.ಎಸ್.ನಟರಾಜ್,ಕೊಡ್ಲಿ ಬಸವರಾಜ್, ತಿಪ್ಪೇರುದ್ರಸ್ವಾಮಿ, ಎಂ.ಎಸ್. ಪುಟ್ಟಮಲ್ಲಪ್ಪ, ಎಂ.ಸಿ ಚಂದ್ರಶೇ ಖರ್, ಶಿಕ್ಷಕರಾದ ದಿಬ್ಬೂರು ಪ್ರಕಾಶ್, ವೈ.ಎಂ. ಚನ್ನಯ್ಯ, ಕಸುವನಹಳ್ಳಿ ವೀರಭದ್ರಪ್ಪ, ಚಂದ್ರಪ್ಪ, ಸುಜಿತ್ ಇನ್ನಿತರರು ಉಪಸ್ಥಿತರಿದ್ದರು.