Advertisement

ಕಟಪಾಡಿ: ಪೂಜೆ ಮುಗಿಸಿ ಬರುವಾಗ ಕುಸಿದು ಬಿದ್ದು ಮಹಿಳೆ ನಿಧನ

01:25 PM Oct 04, 2022 | Team Udayavani |

ಕಟಪಾಡಿ: ಪೂಜೆಗೆ ತೆರಳಿ ವಾಪಾಸ್‌ ಆಗುವ ವೇಳೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಣಿಪುರ ದೆಂದೂರುಕಟ್ಟೆಯಲ್ಲಿ ನಡೆದಿದೆ.

Advertisement

ಮಣಿಪುರ ದೆಂದೂರುಕಟ್ಟೆ, ಇಂದ್ರಾಳಿ ತೋಟದ ಗೌರಿ ಪೂಜಾರ್ತಿ (54) ಮೃತ ಮಹಿಳೆ. ಕುಸಿದು ಬಿದ್ದ ಗೌರಿ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಮಣಿಪಾಲದ ಆಸ್ಪತ್ರೆಯೊಂದರಲ್ಲಿ  ಹೌಸ್‌ ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ ಗೌರಿ ಪೂಜಾರ್ತಿ  ಕಳೆದ ಹಲವು ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದರು. ಸೋಮವಾರ ಸಂಜೆ ಸುಮಾರು 3:45 ಗಂಟೆಗೆ ಸಂಬಂಧಿಕರ ಮನೆಯಲ್ಲಿನ ಪೂಜಾ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಮರಳಿ ಬರುವಾಗ ಕುಸಿದು ಬಿದ್ದಿದ್ದಾರೆ.

ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next