ಕಲಬುರಗಿ: ವೈದ್ಯರ ನಿರ್ಲಕ್ಯದ ಕಾರಣದಿಂದ ಮಹಿಳೆ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಕಲಬುರಗಿಯಲ್ಲಿ ಶನಿವಾರ ನಡೆದಿದೆ.
ಕರುಣೇಶ್ವರ ನಗರದ ಸಂಜನಾ ಆಸ್ಪತ್ರೆ ಎದುರು ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಇಟಗಾ ಗ್ರಾಮದ ನಾಗಮ್ಮ ಬಾಗೋಡಿ (45) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ರಾತ್ರಿ ಕರ್ಫ್ಯೂ ಜಾರಿ ಕುರಿತಂತೆ ರವಿವಾರ ಸಭೆಯಲ್ಲಿ ಚರ್ಚೆ: ಸಿಎಂ ಬೊಮ್ಮಾಯಿ
ಸಂಜನಾ ಆಸ್ಪತ್ರೆಯಲ್ಲಿ ನಾಗಮ್ಮ ಬಾಗೋಡಿ ಅವರು ಗರ್ಭಕೋಶದ ಸಮಸ್ಯೆಯ ಕಾರಣದಿಂದ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಮಹಿಳೆಗೆ ವೈದ್ಯೆ ಡಾ.ಜಂಪಾ ಒಂದೇ ವಾರದಲ್ಲಿ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಿದ್ದರು. ಎರಡನೇ ಬಾರಿ ಶಸ್ತ್ರಚಿಕಿತ್ಸೆ ವೇಳೆ ನಾಗಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇದರ ಬಳಿಕ ಸ್ವತಃ ಡಾ.ಜಂಪಾ ಅವರೇ ಮತೊಂದು ಖಾಸಗಿ ಆಸ್ಪತ್ರೆಗೆ ನಾಗಮ್ಮಳನ್ನು ದಾಖಲಿಸಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಾಗಮ್ಮ ಸಾವನ್ನಪ್ಪಿದ್ದಾರೆ. ನಾಗಮ್ಮ ಸಾವಿಗೆ ವೈದ್ಯರೇ ಕಾರಣ ಎಂದು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದು, ರೋಗಿಯ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ, ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.