Advertisement

ಮಹಿಳೆಯೊಬ್ಬಳು ತನ್ನ ಭುಜದ ಮೇಲೆ ಕುರಿಯನ್ನು ಹೊತ್ತಳು!

01:15 AM Jan 05, 2022 | Team Udayavani |

ಹೊಸದಿಲ್ಲಿ: ಮನುಷ್ಯ ಮತ್ತು ಇತರ ಪ್ರಾಣಿವರ್ಗದ ನಡುವೆ ಸಾಮರಸ್ಯ ಉಳಿದುಕೊಳ್ಳುವುದು ಪ್ರಕೃತಿಯ ಸಮತೋಲನದ ದೃಷ್ಟಿಯಿಂದ ಅಗತ್ಯ. ಅಂತಹ ಅಪೂರ್ವ ಘಟನೆ ಬ್ರೆಜಿಲ್‌ನಲ್ಲಿ ಕಂಡುಬಂದಿದೆ.

Advertisement

ಅದು ಯಾವ ಪ್ರದೇಶ, ವ್ಯಕ್ತಿಯ ಹೆಸರೇನು ಎಂಬ ಮಾಹಿತಿ ಲಭ್ಯವಿಲ್ಲ. ಆದರೆ ವೀಡಿಯೋ ಒಂದರಲ್ಲಿ ಆಹಾರ ಕ್ಕಾಗಿ ಹಪಹಪಿಸುತ್ತಿದ್ದ ಕುರಿಯನ್ನು ಮಹಿಳೆಯೊಬ್ಬಳು ತನ್ನ ಭುಜದ ಮೇಲೆ ಹತ್ತಿ ಕೂರಿಸಿಕೊಳ್ಳುತ್ತಾಳೆ. ಪರಿ ಣಾಮ ಕುರಿಗೆ ತನಗೆ ಬೇಕಾಗಿದ್ದ ಎಲೆ ಗಳನ್ನು ತಿನ್ನಲು ಸಾಧ್ಯವಾಗುತ್ತದೆ. ಅದಕ್ಕೂ ಮುನ್ನ ಕುರಿಗೆ ಎಲೆಗಳು ಎಟುಕುತ್ತಿರಲಿಲ್ಲ.

ಅನಂತರ ಮಹಿಳೆಯೇ “ಬಾ ಭುಜದಲ್ಲಿ ಕೂರು’ ಎಂದು ಮಾತಾಡಿಸುತ್ತ ಕುರಿಯನ್ನು ಮೇಲೆತ್ತಿಕೊಳ್ಳುತ್ತಾಳೆ! ಜಾಲ ತಾಣಗಳಲ್ಲಿ ಮಹಿಳೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next