ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಮರವಾರಪಲ್ಲಿ ಗ್ರಾಮದಲ್ಲಿ ಮಹಿಳೆಯೋರ್ವರು ಆ್ಯಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ರವಿವಾರ ಬೆಳಿಗ್ಗೆ ನಡೆದಿದೆ.
ಕಮ್ಮವಾರಪಲ್ಲಿ ಗ್ರಾಮದ ಸುಧಾ ಎಂಬವರು ಆ್ಯಂಬುಲೆನ್ಸ್ ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ.
ಇಂದು ಬೆಳಗ್ಗೆ ಸುಧಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಸಮೀಪದ ಸಾರ್ವಜನಿಕ ಆಸ್ಪತ್ರೆಗೆಂದು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲಾಗಿದೆ. ಈ ಸಂದರ್ಭದಲ್ಲಿ ಆ್ಯಂಬುಲೆನ್ಸ್ ನಲ್ಲಿ ನೋವು ಹೆಚ್ಚಾಗಿ ಹೆರಿಗೆ ಆಗಿದ್ದು ಸುಧಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆಶಾ ಕಾರ್ಯಕರ್ತೆ ಜೊತೆಗೆ ಆ್ಯಂಬುಲೆನ್ಸ್ ಸಿಬ್ಬಂದಿ ಸೀನಪ್ಪ, ಮುರಳಿ ಇದ್ದು ಹೆರಿಗೆಯನ್ನ ಸುಸೂತ್ರವಾಗಿ ನಡೆಸಿದ್ದಾರೆ. ಸದ್ಯ ತಾಯಿ ಮಗು ಆರೋಗ್ಯವಂತವಾಗಿದ್ದಾರೆ.