ಸಿರೋಹಿ : ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ 45 ವರ್ಷದ ಮಹಿಳೆಯನ್ನು ಆಕೆಯ ಪತಿಯ ಎದುರೇ ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಾಲ್ವರು ದರೋಡೆ ಮಾಡುವ ಉದ್ದೇಶದಿಂದ ದಂಪತಿಯ ಮನೆಗೆ ಪ್ರವೇಶಿಸಿದ್ದರು. ದಂಪತಿಗಳು ಆಘಾತಕ್ಕೊಳಗಾಗಿದ್ದು, ಗುರುವಾರ ಮನೆಯೊಳಗೆ ಉಳಿದುಕೊಂಡಿದ್ದಾರೆ. ಶುಕ್ರವಾರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ಕನೆಯವನಿಗಾಗಿ ಶೋಧ ನಡೆಸಲಾಗುತ್ತಿದೆ. ಸಂತ್ರಸ್ತ ಮಹಿಳೆಯ ಪತಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು,ಬುಧವಾರ ರಾತ್ರಿ ದಂಪತಿ ಮಲಗಲು ತಯಾರಿ ನಡೆಸುತ್ತಿದ್ದಾಗ ನಾಲ್ವರು ಮನೆಗೆ ನುಗ್ಗಿ ಒತ್ತೆಯಾಳಾಗಿ ಇರಿಸಿದ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜೇತು ಸಿಂಗ್ ಹೇಳಿದ್ದಾರೆ.
ಪುರುಷನನ್ನೂ ವಿವಸ್ತ್ರಗೊಳಿಸಿದರು ಮತ್ತು 1,400 ರೂ.ದರೋಡೆ ಮಾಡಿದ್ದಾರೆ. ಅವರ ಬಳಿ ಹೆಚ್ಚಿನ ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ನೀಡಲು ಒತ್ತಾಯಿಸಿದರು ಆದರೆ ಕೆಲವು ಬೆಳ್ಳಿ ಆಭರಣಗಳನ್ನು ಹೊರತುಪಡಿಸಿ ದಂಪತಿಗಳ ಬಳಿ ಹೆಚ್ಚೇನೂ ಇರಲಿಲ್ಲ.ಆಕ್ರೋಶಗೊಂಡ ನಾಲ್ವರು ನಂತರ ಗ್ಯಾಂಗ್ ರೇಪ್ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.