Advertisement

ದಕ್ಷಿಣ ಗೋವೆಯಲ್ಲಿ ಮಹಿಳೆಯ ಕೊಲೆ; ಇಬ್ಬರು ಆರೋಪಿಗಳು ಅರೆಸ್ಟ್‌

10:03 AM Jun 09, 2019 | Team Udayavani |

ಪಣಜಿ: ದಕ್ಷಿಣ ಗೋವೆಯ ಸಾಂಗ್ವೆ ಯಲ್ಲಿ  30ರ ಹರೆಯದ ಮಹಿಳೆ ಕೊಲೆಯಾಗಿದ್ದು ಪೊಲೀಸರು ಆ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

Advertisement

ವಲೆನ್ಸಿಯಾ ಫೆರ್ನಾಂಡಿಸ್‌ ಎಂಬ ಮಹಿಳೆಯ ಮೃತ ದೇಹ ನಿನ್ನೆ ಶುಕ್ರವಾರ ಗ್ರಾಮವೊಂದರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಈ ಸಂಬಂಧ ಶೈಲೇಶ್‌ ವೆಲಿಪ್‌ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಪೊಲೀಸರು ಕೆಲ ತಾಸುಗಳ ಬಳಿಕ ಬಂಧಿಸಿದರು.

ತನಗೆ ಕೊಟ್ಟಿದ್ದ ಸಾಲವನ್ನು ಮಹಿಳೆಯು ಪದೇ ಪದೇ ವಾಪಸ್‌ ಕೇಳುತ್ತಿದ್ದ ಕಾರಣ ತಾನು ಆಕೆಯನ್ನು ಕೊಂದೆ ಎಂದು ವೆಲಿಪ್‌ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next